Friday , September 21 2018
ಕೇಳ್ರಪ್ಪೋ ಕೇಳಿ
Home / Film News / ಜಾಕಿ ಬೆಡಗಿಯ ಕಲ್ಯಾಣ : ಕರ್ನಾಟಕದ ಸೊಸೆಯಾದ ಮಲಯಾಳಂ ನಟಿ

ಜಾಕಿ ಬೆಡಗಿಯ ಕಲ್ಯಾಣ : ಕರ್ನಾಟಕದ ಸೊಸೆಯಾದ ಮಲಯಾಳಂ ನಟಿ

ತಿರುವನಂತಪುರಂ : ದಕ್ಷಿಣ ಭಾರತದ ಸುಂದರ ನಟಿ ಭಾವನಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂ ಬೆಡಗಿ ಭಾವನಾ ಇನ್ನು ಮುಂದೆ ಕರ್ನಾಟಕದ ಸೊಸೆ. ಭಾವನಾ ಕೈ ಹಿಡಿದಿರುವುದು ಸ್ಯಾಂಡಲ್‍ವುಡ್ ನಿರ್ಮಾಪಕ ನವೀನ್‍ರನ್ನು. ತ್ರಿಶೂರ್‍ನ ಶ್ರೀಕೃಷ್ಣ ದೇವಾಲಯದಲ್ಲಿ ಇವರಿಬ್ಬರ ವಿವಾಹ ಸಮಾರಂಭ ನಡೀತು. ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಭಾವನಾ ನವೀನ್ ಮದುವೆಗೆ ಸಾಕ್ಷಿ ಆದರು. ಇನ್ನು, ನಿನ್ನೆಯೇ ಕೋವಿಲಕತ್ತುಮ್ ಪದಮ್‍ನ ಜವಾಹರ್‍ಲಾಲ್ ಕನ್ವೆಷನ್ ಸೆಂಟರ್‍ನಲ್ಲಿ ಭರ್ಜರಿ ರಿಸೆಪ್ಶನ್ ನಡೆದಿದ್ದು, ಮಮ್ಮುಟ್ಟಿ, ಪೃಥ್ವಿರಾಜ್ ಸೇರಿದ್ದಂತೆ ಸ್ಟಾರ್ ನಟರೆಲ್ಲಾ ಪಾಲ್ಗೊಂಡಿದ್ದರು.

ಭಾವನಾ ಕನ್ನಡದಲ್ಲಿ ಜಾಕಿ, ಬಚ್ಚನ್, ಯಾರೇ ಕೂಗಾಡಲಿ, ವಿಷ್ಣುವರ್ಧನ, ರೋಮಿಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇದರಲ್ಲಿ ರೋಮಿಯೋ ಚಿತ್ರವನ್ನು ನವೀನ್ ಅವರೇ ನಿರ್ಮಿಸಿದ್ದರು. ಇದೇ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು…

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!