Tuesday , May 22 2018
Home / Gossip / ಚಿತ್ರರಂಗ ಬಿಡ್ತಾರಾ ಪವನ್ ಕಲ್ಯಾಣ್…?

ಚಿತ್ರರಂಗ ಬಿಡ್ತಾರಾ ಪವನ್ ಕಲ್ಯಾಣ್…?

ಚೆನ್ನೈ : ಪವರ್ ಸ್ಟಾರ್ ಪವನ್ ಕಲ್ಯಾಣ್ ಈಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಕ್ಷೇತ್ರ ಕ್ಷೇತ್ರ ಸಂಚರಿಸಲು ಪವನ್ ಆರಂಭಿಸಿದ್ದಾರೆ. ಇದರ ನಡುವೆ, ಪವನ್ ಕಲ್ಯಾಣ್ ಸಿನೆಮಾವನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಮೂರು ದಿನಗಳ ರಾಜ್ಯ ಪ್ರವಾಸ ಆರಂಭಿಸಿದ ಬಳಿಕ ಮೊದಲನೇ ದಿನವನ್ನು ಪೂರೈಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಸದ್ಯಕ್ಕೆ ‘ಯಾವ ಸಿನೆಮಾದ ಮೇಲೂ ವ್ಯಾಮೋಹ ಇಲ್ಲ’ ಎಂದು ಹೇಳಿದ್ದಾರೆ. ಸದ್ಯಕ್ಕೆ ಸಿನೆಮಾಗಳು ನನ್ನ ಯೋಚನೆಯ ಪರಿಧಿಯಿಂದ ಆಚೆ ಇವೆ. ಈಗ ನನ್ನ ಗಮನ ಏನಿದ್ದರೂ ರಾಜಕೀಯದತ್ತ ಎಂಬುದು ಪವನ್ ಕಲ್ಯಾಣ್ ಸ್ಪಷ್ಟ ನುಡಿ.

ಹಾಗಂತ, ಇದೇ ಮೊದಲ ಬಾರಿಗೆ ಪವನ್ ಇಂತಹ ಹೇಳಿಕೆ ನೀಡುತ್ತಿರುವುದಲ್ಲ. ಈ ಹಿಂದೆಯೂ ಹಲವು ಸಲ ಸಿನಿಮಾ ಜಗತ್ತಿನಿಂದ ದೂರ ಆಗುವುದಾಗಿ ಪವನ್ ಹೇಳಿದ್ದರು. ಜೊತೆಗೆ, ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಇರಾದೆಯನ್ನೂ ವ್ಯಕ್ತಪಡಿಸಿದ್ದರು. ಬಹುಶಃ ಇದೀಗ ಪೂರ್ಣ ಪ್ರಮಾಣದಲ್ಲಿ ರಾಜಕೀಯದತ್ತ ಮುಖ ಮಾಡಲು ಪವನ್ ನಿರ್ಧರಿಸಿದಂತಿದೆ.

About sudina

Check Also

ಇದು ರಜನಿ, ಅಕ್ಷಯ್ ಅಭಿಮಾನಿಗಳಿಗೆ ಬೇಸರದ ಸುದ್ದಿ…!

ಚೆನ್ನೈ : ಡೈರೆಕ್ಟರ್ ಶಂಕರ್ ನಿರ್ದೇಶನದ 2.0 ಚಿತ್ರ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಇದು ಸೂಪರ್ ಹಿಟ್ ಎಂದಿರನ್ ಚಿತ್ರದ …

Leave a Reply

Your email address will not be published. Required fields are marked *

error: Content is protected !!