Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / ಮಾನವ ಹಕ್ಕುಗಳ ಜಾಗೃತಿ : ಶಾರೂಖ್‍ಗೆ ಡಬ್ಲೂಇಎಫ್ ಪ್ರಶಸ್ತಿ

ಮಾನವ ಹಕ್ಕುಗಳ ಜಾಗೃತಿ : ಶಾರೂಖ್‍ಗೆ ಡಬ್ಲೂಇಎಫ್ ಪ್ರಶಸ್ತಿ

ನವದೆಹಲಿ : ಮಾನವ ಹಕ್ಕುಗಳ ಜಾಗೃತಿ ಮತ್ತು ಆ್ಯಸೀಡ್ ದಾಳಿಗೊಳಗಾದ ಸಂತ್ರಸ್ತರ ಪರವಾಗಿ ಮಾಡಿದ ಸೇವೆಗೆ ಬಾಲಿವುಡ್ ನಟ ಶಾರೂಖ್ ಖಾನ್‍ಗೆ ವಲ್ರ್ಡ್ ಎಕಾನಮಿಕ್ ಫಾರಂ ಪ್ರಶಸ್ತಿ ಲಭಿಸಿದೆ. ಸೋಮವಾರ ನಡೆದ ಸಮಾರಂಭದಲ್ಲಿ ಶಾರೂಖ್ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಹಿಂದಿ ಸಿನೆಮಾ ಲೋಕದಲ್ಲಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಶಾರೂಖ್‍ರನ್ನು ಈ ಸಂಸ್ಥೆ ಗೌರವಿಸಿದೆ. ಡಬ್ಲೂಇಎಫ್ ಆ್ಯಸೀಡ್ ದಾಳಿಗೊಳಗಾದ ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತದೆ. ಚಿಕಿತ್ಸೆಗೆ ಸಹಾಯ, ಕಾನೂನು ಸಲಹೆ, ಪುನರ್ವಸತಿ, ತರಬೇತಿ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಆ್ಯಸೀಡ್ ದಾಳಿ ಸಂತ್ರಸ್ತರಿಗೋಸ್ಕರ ಈ ಸಂಸ್ಥೆ ಮಾಡುತ್ತಿದೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!