Monday , May 21 2018
Home / Film News / ಶ್ರಮಕ್ಕೆ ಇನ್ನೊಂದು ಹೆಸರೇ ಅಮಿತಾಭ್…! : ಇದಕ್ಕೇ ಬಿಗ್ ಬಿ ಇಷ್ಟವಾಗೋದು…

ಶ್ರಮಕ್ಕೆ ಇನ್ನೊಂದು ಹೆಸರೇ ಅಮಿತಾಭ್…! : ಇದಕ್ಕೇ ಬಿಗ್ ಬಿ ಇಷ್ಟವಾಗೋದು…

ಮುಂಬೈ : ಟಿ ಟೌನ್‍ನಲ್ಲಿ ಅಮಿತಾಭ್ ಬಚ್ಚನ್ ಅನಭಿಷಿಕ್ತ ದೊರೆ. ಶ್ರಮಕ್ಕೆ ಮತ್ತೊಂದು ಹೆಸರು ಅಮಿತಾಭ್. ಈ ಇಳಿ ವಯಸ್ಸಿನಲ್ಲೂ ಇವರ ಪುಟಿಯುವ ಉತ್ಸಾಹ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಅವರೊಬ್ಬ ಜೀವಂತ ದಂತಕತೆ… ಅಮಿತಾಭ್ ಅವರೆಷ್ಟು ಶ್ರಮಜೀವಿ ಅನ್ನೋದಕ್ಕೆ ಇದೇ ಸಾಕ್ಷಿ ನೋಡಿ… ಮದುವೆ ರಿಸೆಪ್ಶನ್ ಒಂದಕ್ಕೆ ಹೋಗಿದ್ದ ಅಮಿತಾಭ್ ಅವರು ರಾತ್ರಿ ಮನೆಗೆ ಹೋಗಿ ಮಲಗಲಿಲ್ಲ. ಬದಲಾಗಿ ತಾನು ಮಾಡಬೇಕಾದ ಕೆಲಸವನ್ನು ಮುಗಿಸಿದ್ದಾರೆ. ಅದೂ ಬೆಳಗ್ಗಿನ ಜಾವ 4 ಗಂಟೆಯ ತನಕ…! ಅದಕ್ಕೇ ಹೇಳಿದ್ದು ಅಮಿತಾಭ್ ಅವರಿಗೆ ಅಮಿತಾಭ್ ಅವರೇ ಸಾಟಿ ಅಂತ.


ಕಾಯಕವೇ ಕೈಲಾಸ ಎಂದು ನಂಬಿ ಕೆಲಸ ಮಾಡುವವರು ಮೆಗಾಸ್ಟಾರ್ ಅಮಿತಾಭ್. ಚಿತ್ರವೊಂದರ ಹಾಡನ್ನು ಹಾಡುವುದಕ್ಕೋಸ್ಕರ ಅಮಿತಾಭ್ ಮದುವೆ ಕಾರ್ಯಕ್ರಮ ಮುಗಿಸಿ ಸ್ಟುಡಿಯೋಗೆ ಬಂದಿದ್ದರು. ಈ ರಿಕಾರ್ಡಿಂಗ್ ಮುಗಿದದ್ದು ಮುಂಜಾನೆ 4 ಗಂಟೆಗೆ…! ಇದರೊಂದಿಗೆ ಅಮಿತಾಭ್ ತಮ್ಮ ಮುಖದ ವಿವಿಧ ಹಾವಭಾವಗಳ ಕೊಲ್ಯಾಜ್ ಅನ್ನೂ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅಮಿತಾಭ್ ಅವರ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ…

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!