Sunday , July 22 2018
ಕೇಳ್ರಪ್ಪೋ ಕೇಳಿ
Home / Film News / ಹರಿಪ್ರಿಯ ಕಾಲ್ನಡಿಗೆ : 11 ಕಿಲೋ ಮೀಟರ್ ನಡೆದೇ ತಿಮ್ಮಪ್ಪನ ದರ್ಶನ

ಹರಿಪ್ರಿಯ ಕಾಲ್ನಡಿಗೆ : 11 ಕಿಲೋ ಮೀಟರ್ ನಡೆದೇ ತಿಮ್ಮಪ್ಪನ ದರ್ಶನ

ಹೈದರಾಬಾದ್ : ಸ್ಯಾಂಡಲ್‍ವುಡ್ ನಟಿ ಹರಿಪ್ರಿಯ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವಿಶೇಷ ಅಂದರೆ ಸುಮಾರು 11 ಕಿಲೋ ಮೀಟರ್‍ನಷ್ಟು ಕಾಲ್ನಡಿಗೆಯಲ್ಲೇ ಸಾಗಿ ಹರಿಪ್ರಿಯ ದೇವರ ದರ್ಶನ ಪಡೆದುಕೊಂಡಿದ್ದಾರೆ. ಸಾಮಾನ್ಯ ಜನರೇ ಈಗೀಗ ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತುವುದು ಅಪರೂಪ. ಕೆಲವೇ ಕೆಲವರು ಹೀಗೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಹೀಗಿರುವಾಗ ಸೆಲೆಬ್ರಿಟಿಗಳು ನಡೆದೇ ದೇವರ ದರ್ಶನ ಪಡೆಯುವುದು ತುಂಬಾ ದೂರದ ಮಾತು. ಇದಕ್ಕೆ ನಾನಾ ಕಾರಣಗಳೂ ಇರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಹರಿಪ್ರಿಯ ನಡೆದುಕೊಂಡೇ ತಿರುಮಲವನ್ನು ಏರಿದ್ದಾರೆ.

ಅಲಿಪಿರಿಯಿಂದ ಹರಿಪ್ರಿಯ ಕಾಲ್ನಡಿಗೆ ಆರಂಭಿಸಿದ್ದಾರೆ. ಅಂದರೆ ಇಲ್ಲಿಂದ ಸುಮಾರು 3550 ಮೆಟ್ಟಿಲುಗಳನ್ನು ಏರಿ ತಿಮ್ಮಪ್ಪನ ದರ್ಶನ ಪಡೆದ ಖುಷಿಯಲ್ಲಿ ಹರಿಪ್ರಿಯಾ ಇದ್ದಾರೆ. ಈ ಸಂತೃಪ್ತಿಯ ಕ್ಷಣಗಳನ್ನು ಹರಿಪ್ರಿಯ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!