Friday , April 20 2018
Home / Interval / ಬಿ ಟೌನ್​ನಲ್ಲಿ ಸುನಿಲ್ ಶೆಟ್ಟಿ ‘ಅಣ್ಣ’ ಆಗಿದ್ದು ಹೇಗೆ ಗೊತ್ತಾ…?

ಬಿ ಟೌನ್​ನಲ್ಲಿ ಸುನಿಲ್ ಶೆಟ್ಟಿ ‘ಅಣ್ಣ’ ಆಗಿದ್ದು ಹೇಗೆ ಗೊತ್ತಾ…?

ಸುನಿಲ್ ಶೆಟ್ಟಿ ಬಾಲಿವುಡ್​ನ ಕಟ್​ಮಸ್ತ್​ ಹೀರೋ. ಕರುನಾಡ ಕುವರ ಇವರು. ಸುನಿಲ್ ಶೆಟ್ಟಿ ಮೂಲ ಕರ್ನಾಟಕದ ದಕ್ಷಿಣ ಕನ್ನಡ. ಇಂತಹ ಹುಡುಗ ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಆಳಿದ್ದ ಹೀರೋ. ಈಗಲೂ ಸುನಿಲ್ ಶೆಟ್ಟಿಗೆ ಬಿ ಟೌನ್​ನಲ್ಲಿ ತನ್ನದೇ ಆದ ಸ್ಥಾನಮಾನ ಇದೆ. ಸಿನಿಲೋಕ ಕಂಡ ಸಚ್ಚಾರಿತ್ರ ಹೀರೋಗಳಲ್ಲಿ ಸುನಿಲ್ ಶೆಟ್ಟಿ ಕೂಡಾ ಒಬ್ಬರು. ಇಂತಹ ಸುನಿಲ್ ಬಾಲಿವುಡ್​ಗೆ ‘ಅಣ್ಣ’ ಎಂಬುದು ಬಹುಶಃ ಬಹುತೇಕರಿಗೆ ಗೊತ್ತಿಲ್ಲ.

ಸಂಜಯ್​ ದತ್​ರಿಂದ ಅಣ್ಣ ಆದ ಸುನಿಲ್ : ರಿಕ್ಟರ್ ಜಯ್​ಗುಪ್ತಾ ಅಮಿತಾಭ್ ಬಚ್ಚನ್​, ಸಂಜಯ್ ದತ್ ಹಾಗೂ ಸುನಿಲ್ ಶೆಟ್ಟಿ ಅವರನ್ನು ಹಾಕಿಕೊಂಡು ಒಂದು ಸಿನೆಮಾ ಮಾಡಿದರು. ಸಿನೆಮಾದ ಹೆಸರು ಕಾಂಟೆ.

ಒಂದು ದಿನ ಶೂಟಿಂಗ್ ಸಂದರ್ಭದಲ್ಲಿ ಊಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಊಟ ಮಾಡುತ್ತಿದ್ದರು. ಈ ವೇಳೆ, ಸಂಜಯ್ ದತ್ ತಮಾಷೆಗೆಂದು ಸುನಿಲ್ ಶೆಟ್ಟಿಯನ್ನು ‘ಅಣ್ಣ’ ಎಂದು ಕರೆದಿದ್ದರು. ಸಾಮಾನ್ಯವಾಗಿ ಹಿರಿಯನಿಗೆ ಎಲ್ಲರೂ ಅಣ್ಣ ಅಂತ ಕರೀತಾರೆ. ಹೀಗೆ ಹೇಳಿ ಗೆಳೆಯ ಸುನಿಲ್ ಶೆಟ್ಟಿಯನ್ನು ಒಂದಷ್ಟು ಹೊತ್ತು ತಮಾಷೆಗೆ ಆಟ ಆಡಿಸಬಹುದು ಎಂದು ದತ್​ ನಿರ್ಧರಿಸಿದ್ದರು. ಹೀಗಾಗಿ, ಪದೇ ಪದೇ ಸುನಿಲ್ ರನ್ನು ಸಂಜಯ್ ಅಣ್ಣ ಅಣ್ಣ ಎಂದೇ ಹೇಳುತ್ತಿದ್ದರು. ಅಲ್ಲಿ ತನಕ ಎಲ್ಲವೂ ಸರಿ ಇತ್ತು. ಆದರೆ, ಹಿರಿಯ ನಟ ಅಮಿತಾಭ್ ಕೂಡಾ ಸುನಿಲ್ ರನ್ನು ಅಣ್ಣ ಎಂದು ಕರೆಯುವುದಕ್ಕೆ ಆರಂಭಿಸಿದರು. ಇದಾದ ಬಳಿಕ ಇಡೀ ಶೂಟಿಂಗ್ ಯೂನಿಟ್ ಕೂಡಾ ಸುನಿಲ್ ರನ್ನು ಅಣ್ಣಾ ಎಂದೇ ಕರೆಯುವುದಕ್ಕೆ ಆರಂಭಿಸಿತ್ತು. ಕೆಲವು ತಿಂಗಳು ಕಳೆದ ಬಳಿಕ ಇಡೀ ಚಿತ್ರರಂಗವೇ ಸುನಿಲ್ ಶೆಟ್ಟಿಯನ್ನು ‘ಅಣ್ಣ’ ಎಂದು ಕರೆಯಲು ಆರಂಭಿಸಿತ್ತು. ಹೀಗೆ, ಸುನಿಲ್ ಶೆಟ್ಟಿ ಅವರಿಗೆ ಹೊಸ ಹೆಸರೊಂದು ಸಿಕ್ಕಿತ್ತು. ನಂತರ ರಿಲೀಸ್ ಆದ ಕೆಲವು ಚಿತ್ರಗಳಲ್ಲಿ ಸುನಿಲ್ ನಿರ್ವಹಿಸಿದ ಪಾತ್ರದ ಹೆಸರು ಕೂಡಾ ‘ಅಣ್ಣ’ ಎಂದೇ ಆಗಿತ್ತು… ಇದಾದ ಬಳಿಕ ಎಲ್ಲರೂ ಸುನಿಲ್ ರನ್ನು ಇಂದಿಗೂ ಕರೆಯುವುದು ಅಣ್ಣ ಎಂದೇ…

About sudina

Check Also

‘ಅಮರ್ ಅಕ್ಬರ್ ಅಂಥೋನಿ’ ಚಿತ್ರದ ಕತೆ ಹುಟ್ಟಿದ್ದು ಹೇಗೆ ಗೊತ್ತಾ…?

ಅದು 70ರ ದಶಕ. ನಿರ್ದೇಶಕ ಮನ್ಮೋಹನ್ ದೇಸಾಯಿ ಬೆಳಗ್ಗೆ ಪೇಪರ್ ಓದುತ್ತಿದ್ದರು. ಈ ವೇಳೆ. ಒಂದು ಸುದ್ದಿ ದೇಸಾಯಿ ಅವರನ್ನು …

Leave a Reply

Your email address will not be published. Required fields are marked *

error: Content is protected !!