Sunday , July 22 2018
ಕೇಳ್ರಪ್ಪೋ ಕೇಳಿ
Home / Psychology / ಲವ್ ಬಗ್ಗೆ ನಿಮಗೆಷ್ಟು ಗೊತ್ತು…? : ಪ್ರಾಣಿಗಳೂ ಪ್ರೀತಿಸುತ್ತವೆ…!

ಲವ್ ಬಗ್ಗೆ ನಿಮಗೆಷ್ಟು ಗೊತ್ತು…? : ಪ್ರಾಣಿಗಳೂ ಪ್ರೀತಿಸುತ್ತವೆ…!

ಪ್ರೀತಿ ಒಂದು ಮಧುರ ಅನುಭವ… ಪದಗಳಲ್ಲಿ ಇದನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಭೂಮಿಯಲ್ಲಿ ಇರುವ ಪ್ರತಿಯೊಂದು ಜೀವವೂ ಪ್ರೀತಿಗಾಗಿ ಹಾತೊರೆಯುತ್ತಿರುತ್ತದೆ. ಇದು ಹೃದಯದ ಭಾಷೆ, ಕಣ್ಣಿನ ಮಾತು. ಪ್ರೀತಿ ಇಲ್ಲದೆ ಜಗತ್ತೇ ಇಲ್ಲ. ಇದೊಂದು ಸುಂದರ ಅನುಬಂಧ…

ಪ್ರೀತಿಗೆ ಬೀಳುವುದು ಮತ್ತು ಒಂದು ಡೋಸ್ ಕೊಕೈನ್ ಅನ್ನು ಸೇವಿಸುವುದು ಒಂದೇಯಂತೆ. ಅಂದರೆ, ಎರಡೂ ನಮ್ಮ ಮೆದುಳಿನಲ್ಲಿ ಒಂದೇ ರೀತಿಯ ಪರಿಣಾಮವನ್ನು ಬೀರುತ್ತದೆ. ಪ್ರೀತಿಗೆ ಬಿದ್ದಾಗ ಮೆದುಳು ಸೇರಿದಂತೆ ದೇಹದ 12 ಭಾಗಳಲ್ಲಿ ಪ್ರಚೋದನೆಯನ್ನು ಸೃಜಿಸುತ್ತದೆಯಂತೆ… ಕಣ್ಣು ಹೃದಯದ ಅರಮನೆಯೊಳಗೆ ಸೇರಲು ಇರುವ ಬಾಗಿಲು. ಪರಸ್ಪರ ಪರಿಚಯವೇ ಇಲ್ಲದವನ್ನೂ ಈ ಕಣ್ಣ ದೃಷ್ಟಿ ಒಂದು ಮಾಡುತ್ತದೆ… ಅದಕ್ಕೇ ಹೇಳೋದು ಕಾಣ್ತದೆ ಲವ್ ಆಟ್ ಫಸ್ಟ್ ಸೈಟ್ ಅಂತ. ಇದು ವೈಜ್ಞಾನಿಕವಾಗಿಯೂ ದೃಢವಾಗಿದೆ. ಹೀಗೆ ಒಬ್ಬರನ್ನೊಬ್ಬರು ನೋಡೋದ್ರಿಂದ ಅವರ ದೇಹದಲ್ಲಿ ಕೆಲವೊಂದು ಕೆಮಿಕಲ್‍ಗಳು ಉತ್ಪತ್ತಿಯಾಗುತ್ತವೆ. ಈ ಕೆಮಿಕಲ್‍ಗಳು ಮತ್ತೆ ಮತ್ತೆ ತಮ್ಮ ಆ ಪ್ರೀತಿಯ ನೋಟವನ್ನು ಮುಂದುವರಿಸುವಂತೆ ಪ್ರಚೋದಿಸುತ್ತವೆ.

ಆಕ್ಸಿಟೋಸಿನ್ ಎಂಬುದು ಈ ಪ್ರೀತಿಯ ಭಾವನೆಯನ್ನು ಉದ್ರೇಕಿಸುವ ಪ್ರಮುಖ ಹಾರ್ಮೋನ್. ಮೆದುಳು ಸೇರಿದಂತೆ ದೇಹದ ನಾನಾ ಭಾಗಗಳಲ್ಲಿ ಈ ಹಾರ್ಮೋನ್ ಜನರ ಭಾವನೆಯನ್ನು ಉದ್ರೇಕಿಸಿ ದೇಹದಲ್ಲೊಂದು ವಿಚಿತ್ರ ಅನುಭವ ತರುವಂತೆ ಮಾಡುತ್ತದೆ. ಅಧ್ಯಯನ ಕಂಡುಕೊಂಡ ಸತ್ಯದ ಪ್ರಕಾರ ಆಕ್ಸಿಟೋಸಿನ್‍ನ ಒಂದು ಹನಿ ತಲೆನೋವನ್ನು ಶಮನ ಮಾಡುತ್ತದೆ. ಜೊತೆಗೆ, ದೇಹದಲ್ಲಾದ ವಿವಿಧ ನೋವನ್ನು ದೂರ ಮಾಡುತ್ತದೆಯಂತೆ. ಹೀಗಾಗಿ, ವಿವಿಧ ಮಾತ್ರೆಗಳನ್ನು ಕೊಳ್ಳುವ ಮೊದಲು ಸಂಗಾತಿಯ ಒಂದು ಆಲಿಂಗನವೇ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ ಎನ್ನುವುದು ಅಧ್ಯಯನದಲ್ಲಿ ಕಂಡು ಕೊಂಡ ಸತ್ಯ…

ಮನುಷ್ಯ ಮಾತ್ರ ಜೀವನ ಪರ್ಯಂತ ಒಂದೇ ಸಂಗಾತಿಗಳನ್ನು ಬಯಸುತ್ತಾನೆ ಅಂತ ನಾವು ಅಂದುಕೊಂಡಿದ್ದೇವೆ. ಆದರೆ, ಖಂಡಿತಾ ಇದು ತಪ್ಪು. ಕೆಲವೊಂದು ಪ್ರಾಣಿಗಳಲ್ಲೂ ಜೀವನ ಪರ್ಯಂತ ಒಂದೇ ಸಂಗಾತಿಯೊಂದಿಗೆ ಇರುತ್ತವೆ. ಇದು ಕೂಡಾ ಅಧ್ಯಯನದಿಂದ ದೃಢವಾದ ಸತ್ಯ. ತೋಳಗಳು, ಹಂಸ, ಗಿಬ್ಬಾನ್ ಎಂಬ ಕೋತಿಗಳು, ಹದ್ದುಗಳು, ಕಡಲುಕೋಳಿ ಸೇರಿದಂತೆ ಕೆಲವೊಂದು ಪ್ರಾಣಿಗಳು ಜೀವನ ಪರ್ಯಂತ ಜೊತೆಗಿರುವ ಸಂಗಾತಿಯನ್ನೇ ಹುಡುಕಿಕೊಳ್ಳುತ್ತವೆ ಮತ್ತು ಜೊತೆಯಾಗಿಯೇ ಇರುತ್ತವೆ ಕೂಡಾ… ಅದಕ್ಕೇ ಹೇಳಿದ್ದು ಸುಂದರ ಪ್ರೀತಿ ಸುಂದರ ಅನುಭವ ಅಂತ. ಪ್ರೀತಿ ಎಲ್ಲಾ ನೋವನ್ನೂ ದೂರವಾಗಿಸುತ್ತದೆ. ಬದುಕಿಗೊಂದು ಭದ್ರತೆ ನೀಡುತ್ತದೆ…

About sudina

Leave a Reply

Your email address will not be published. Required fields are marked *

error: Content is protected !!