Saturday , February 16 2019
ಕೇಳ್ರಪ್ಪೋ ಕೇಳಿ
Home / Film News / `ಪರ್ದೇಸಿ, ಪರ್ದೇಸಿ ಜಾನಾ ನಹೀ’ ಅಂದವರು ಈಗ ಹೇಗಿದ್ದಾರೆ ಗೊತ್ತಾ…?

`ಪರ್ದೇಸಿ, ಪರ್ದೇಸಿ ಜಾನಾ ನಹೀ’ ಅಂದವರು ಈಗ ಹೇಗಿದ್ದಾರೆ ಗೊತ್ತಾ…?

ಮುಂಬೈ : ಅಮೀರ್ ಖಾನ್ ಅಭಿನಯದ `ರಾಜಾ ಹಿಂದೂಸ್ಥಾನಿ’ ಚಿತ್ರವನ್ನು ನೋಡಿದವರಿಗೆ `ಪರ್ದೇಸಿ, ಪರ್ದೇಸಿ ಜಾನಾ ನಹೀ’ ಹಾಡು ಖಂಡಿತಾ ನೆನಪಿರುತ್ತದೆ. ಆ ಟೈಮ್‍ನಲ್ಲಿ ಸಖತ್ ಹಿಟ್ ಆದ ಹಾಡಿದು… ಆಗಿನವರು ಮಾತ್ರವಲ್ಲ. ಈಗೀನ ಜರ್ನೆಷನ್‍ನ ಹುಡುಗ ಹುಡುಗಿಯರಿಗೂ ಈ ಹಾಡು ಇಷ್ಟವಾಗುತ್ತದೆ. ಅಂದು ಅಮೀರ್ ಮತ್ತು ಶಾರೂಕ್‍ಗೆ ಪ್ರಸಿದ್ಧಿ ತಂದು ಕೊಟ್ಟಿದ್ದ ಈ ಚಿತ್ರ ಇದೇ ಹಾಡಿನಲ್ಲಿ ನಟಿಸಿದ್ದ ಡ್ಯಾನ್ಸರ್‍ಗೂ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.

ಹೌದು, ಅಂದು ಈ ಹಾಡಿಗೆ ಸೊಂಟ ಬಳುಕಿಸಿದ್ದವರು ನಟಿ ಪ್ರತಿಭಾ ಸಿನ್ಹಾ. ಈ ಹಾಡಿನ ಬಳಿಕ ಇವರಿಗೆ ಸಾಕಷ್ಟು ನೇಮ್ ಮತ್ತು ಫೇಮ್ ಸಿಕ್ಕಿತ್ತು. ಕೋಲ್ಕತ್ತಾದ ಈ ನಟಿ ಈಗ ಹೀಗಿದ್ದಾರೆ ನೋಡಿ…ಇತ್ತೀಚಿನ ದಿನಗಳಲ್ಲಿ ಪ್ರತಿಭಾ ಚಿತ್ರರಂಗದಿಂದ ದೂರ ಇದ್ದಾರೆ. ಅಷ್ಟಾಗಿ ಬಣ್ಣದ ಲೋಕದಲ್ಲಿ ಇವರು ಕಾಣಿಸಿಕೊಳ್ಳುತ್ತಿಲ್ಲ.

ಇವರು ಕಡೆಯದಾಗಿ ಕಾಣಿಸಿಕೊಂಡಿದ್ದ ಚಿತ್ರ 2000ನೇ ಇಸವಿಯಲ್ಲಿ ರಿಲೀಸ್ ಆದ `ಲೇ ಚಲ್ ಅಪ್ನೇ ಸಂಘ್’. ಈ ಚಿತ್ರದ ಬಳಿಕ ಪ್ರತಿಭಾ ಚಿತ್ರರಂಗದಿಂದ ಸಂಪೂರ್ಣ ದೂರವೇ ಉಳಿದಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!