Monday , February 18 2019
ಕೇಳ್ರಪ್ಪೋ ಕೇಳಿ
Home / Film News / ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ

ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ

ಬೆಂಗಳೂರು : ಮೊನ್ನೆಯಷ್ಟೇ ಹಿರಿಯ ನಟ ಕಾಶಿನಾಥ್ ಅವರನ್ನು ಕಳೆದುಕೊಂಡಿರುವ ಸ್ಯಾಂಡಲ್‍ವುಡ್‍ಗೆ ಮತ್ತೊಂದು ಆಘಾತ. ಹಿರಿಯ ನಟ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಅವರು ಕೊನೆಯುಸಿರೆಳೆದಿದ್ದಾರೆ. ಕೆನಡಾದಲ್ಲಿ ಹೃದಯಾಘಾತದಿಂದ ಚಂದ್ರಶೇಖರ್ ವಿಧಿವಶರಾಗಿದ್ದಾರೆ ಎಂದು ಗೊತ್ತಾಗಿದೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ಚಂದ್ರಶೇಖರ್ ಅವರು ಕೆನಡಾದಲ್ಲಿ ವಾಸವಾಗಿದ್ದರು.

ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದ್ದ ಚಂದ್ರಶೇಖರ್ ಕೆಲವು ವರ್ಷಗಳಿಂದ ಸ್ಯಾಂಡಲ್‍ವುಡ್‍ನಿಂದ ದೂರವಾಗಿದ್ದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದ ಇವರು ಮೊನ್ನೆ ರಿಲೀಸ್ ಆಗಿರುವ 3 ಗಂಟೆ 30 ದಿನ 30 ಸೆಕೆಂಡ್ ಚಿತ್ರದಲ್ಲಿ ನಟಿಸಿದ್ದಾರೆ. ಇದೇ ಚಂದ್ರಶೇಖರ್ ಅವರ ಕೊನೆಯ ಚಿತ್ರ. ಹಿರಿಯ ನಟನ ನಿಧನಕ್ಕೆ ಸ್ಯಾಂಡಲ್‍ವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!