Saturday , October 20 2018
ಕೇಳ್ರಪ್ಪೋ ಕೇಳಿ
Home / Film News / ಮಲೇಷ್ಯಾದಲ್ಲೂ ಪದ್ಮಾವತ್ ಬ್ಯಾನ್…!

ಮಲೇಷ್ಯಾದಲ್ಲೂ ಪದ್ಮಾವತ್ ಬ್ಯಾನ್…!

ನವದೆಹಲಿ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಸದ್ಯಕ್ಕೆ ಸಂಕಷ್ಟಗಳು ದೂರವಾಗುವ ಲಕ್ಷಣ ಕಾಣ್ತಿಲ್ಲ. ಭಾರತದ ಹಲವು ಭಾಗಗಳಲ್ಲಿ ಈ ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಚಿತ್ರಕ್ಕೆ ಕೆಲವು ರಾಜ್ಯಗಳಲ್ಲಿ ನಿಷೇಧವನ್ನೂ ಹೇರಲಾಗಿತ್ತು. ಇದೀಗ ಈ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ ಬಳಿಕ ಜನವರಿ 25 ರಂದು ಫಿಲಂ ರಿಲೀಸ್ ಆಗಿ ನೂರು ಕೋಟಿ ಗಳಿಕೆಯ ಗಡಿ ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಮಲೇಷ್ಯಾದಲ್ಲಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದ ಚಿತ್ರತಂಡಕ್ಕೆ ಈಗ ಶಾಕ್ ಆಗಿದೆ. ಯಾಕೆಂದರೆ, ಚಿತ್ರ ಇಸ್ಲಾಂ ಧರ್ಮಕ್ಕೆ ಧಕ್ಕೆಯಾಗುವಂತಹ ಅಂಶ ಇದೆ ಎಂದು ಅಲ್ಲಿನ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ, ಮಲೇಷ್ಯಾದಲ್ಲೂ ಪದ್ಮಾವತ್‍ಗೆ ಸಂಕಷ್ಟ ಎದುರಾಗಿದೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!