Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ತೆಲುಗಿನಲ್ಲಿ ರಚಿತಾ ರಾಮ್ `ಚಮಕ್’…?

ತೆಲುಗಿನಲ್ಲಿ ರಚಿತಾ ರಾಮ್ `ಚಮಕ್’…?

ಬೆಂಗಳೂರು : ಸಿಂಪಲ್ ಸುನಿ ನಿರ್ದೇಶನದ ಚಮಕ್ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಸಕ್ಸಸ್ ಚಿತ್ರಗಳ ಸಾಲಿಗೆ ಸೇರಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಈ ಸಿನೆಮಾ ಈಗಲೂ ಪ್ರದರ್ಶನ ಕಾಣುತ್ತಿದೆ. ಜೊತೆಗೆ, ಈ ಚಿತ್ರ ಬೇರೆ ಚಿತ್ರರಂಗದ ಗಮನವನ್ನೂ ಸೆಳೆದಿದೆ. ಸದ್ಯ ಬಂದಿರುವ ಸುದ್ದಿ ಪ್ರಕಾರ, ಚಮಕ್ ತೆಲುಗಿಗೆ ರಿಮೇಕ್ ಆಗುತ್ತಿದೆ. ಕನ್ನಡದಲ್ಲಿ ರಶ್ಮಿಕಾ ನಿರ್ವಹಿಸಿದ್ದ ಪಾತ್ರವನ್ನು ತೆಲುಗು ಚಮಕ್‍ನಲ್ಲಿ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಬಹುತೇಕ ನಾನಿ ಈ ಚಿತ್ರದ ಹೀರೋ ಆಗುವ ಸಾಧ್ಯತೆ ಇದೆ. ನಿರ್ಮಾಪಕ ಚಂದ್ರಶೇಖರ್ ಅವರೇ ತೆಲುಗು ಚಿತ್ರವನ್ನೂ ನಿರ್ಮಿಸಲಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!