ಬೆಂಗಳೂರು : ರಂಗಿತರಂಗ ಸಹೋದರರ ಬಹುನಿರೀಕ್ಷಿತ ರಾಜರಥ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ಈಗಾಗಲೇ ಕಾಲೇಜು ದಿನಗಳ ಮೊದಲ ಹಾಡು ರಿಲೀಸ್ ಆಗಿ ಅಭಿಮಾನಿಗಳ ಮನಗೆದ್ದಿದೆ. ಇದೀಗ, ಹೇಳೇ ಮೇಘವೇ ಎಂಬ ಹಾಡು ಬಿಡುಗಡೆಯಾಗಿದೆ. ಕನ್ನಡ ಮತ್ತು ತೆಲುಗು ಹಾಡನ್ನು ಚಿತ್ರರಂಗ ಬಿಡುಗಡೆ ಮಾಡಿದೆ. ಈ ಚಿತ್ರ ಫೆಬ್ರವರಿ 16ಕ್ಕೆ ತೆರೆಕಾಣಲಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ.
