Thursday , June 21 2018
ಕೇಳ್ರಪ್ಪೋ ಕೇಳಿ
Home / Gossip / ಇದು ರಜನಿ, ಅಕ್ಷಯ್ ಅಭಿಮಾನಿಗಳಿಗೆ ಬೇಸರದ ಸುದ್ದಿ…!

ಇದು ರಜನಿ, ಅಕ್ಷಯ್ ಅಭಿಮಾನಿಗಳಿಗೆ ಬೇಸರದ ಸುದ್ದಿ…!

ಚೆನ್ನೈ : ಡೈರೆಕ್ಟರ್ ಶಂಕರ್ ನಿರ್ದೇಶನದ 2.0 ಚಿತ್ರ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಇದು ಸೂಪರ್ ಹಿಟ್ ಎಂದಿರನ್ ಚಿತ್ರದ ಎರಡನೇ ಭಾಗ ಎನ್ನುವುದು ಇಲ್ಲಿ ಒಂದು ಕಾರಣವಾದರೆ, ರಜನಿಕಾಂತ್ ಜೊತೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೂಡಾ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಅಭಿಮಾನಿಗಳ ಕಾತರವನ್ನು ಇನ್ನಷ್ಟು ಹೆಚ್ಚಿಸಿದೆ. ಇವರೊಂದಿಗೆ ಬೇರೆ ಬೇರೆ ದೊಡ್ಡ ದೊಡ್ಡ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದ್ರೆ, ಅದೇಕೋ ಈ ಚಿತ್ರಕ್ಕೂ ಇನ್ನೂ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ. ಯಾಕೆಂದರೆ, ಪದೇ ಪದೇ ಈ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ…

ಎಲ್ಲಾ ಅಂದುಕೊಂಡಂತೆ ಆಗಿದ್ದರೆ 2.0 ಚಿತ್ರ 2017ರ ದೀಪಾವಳಿ ವೇಳೆಗೇ ಬಿಡುಗಡೆಯಾಗಬೇಕಿತ್ತು. ಬಳಿಕ 2018ರ ಜನವರಿಗೆ ಚಿತ್ರ ಬಿಡುಗಡೆಯಾಗಲಿದೆ ಎಂದು ಸುದ್ದಿಯಾಗಿತ್ತು. ನಂತರ ಆ ದಿನಾಂಕವೂ ಮುಂದಕ್ಕೆ ಹೋಗಿ ಏಪ್ರಿಲ್​ನಲ್ಲಿ ಫಿಲಂ ರಿಲೀಸ್ ಆಗುತ್ತೆ ಅಂತ ಎಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಇದೀಗ ಬಂದ ಸುದ್ದಿ ಪ್ರಕಾರ, ಏಪ್ರಿಲ್​ನಲ್ಲಿಯೂ ಈ ಚಿತ್ರ ರಿಲೀಸ್ ಆಗುವುದಿಲ್ಲವಂತೆ. ಸದ್ಯ ಹರಿದಾಡುತ್ತಿರುವ ಸುದ್ದಿ ಪ್ರಕಾರ ಚಿತ್ರದ ಬಿಡುಗಡೆ ಇನ್ನೂ ಒಂದಷ್ಟು ತಿಂಗಳು ಮುಂದಕ್ಕೆ ಹೋಗುತ್ತದೆಯಂತೆ. ಬಹುತೇಕ ಆಗಸ್ಟ್ ಮಧ್ಯಭಾಗದಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆಯಂತೆ.

About sudina

Check Also

ಬಾಲಿವುಡ್ ನಟಿಯೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಡೇಟಿಂಗ್…?

ಮುಂಬೈ : ಕ್ರಿಕೆಟಿಗರು ಹಾಗೂ ಸಿನೆಮಾ ನಟಿಯರ ನಡುವೆ ಪ್ರೇಮಾಂಕುರವಾಗುವುದು ಹೊಸದಲ್ಲ. ವಿರಾಟ್ ಅನುಷ್ಕಾ, ಯುವರಾಜ್ ಹಜೆಲ್, ಜಾಹೀರ್ ಖಾನ್ …

Leave a Reply

Your email address will not be published. Required fields are marked *

error: Content is protected !!