Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / ಅಣ್ಣಾವ್ರ ಗೆಟಪ್‍ನಲ್ಲಿ ಶಿವರಾಜ್ ಕುಮಾರ್

ಅಣ್ಣಾವ್ರ ಗೆಟಪ್‍ನಲ್ಲಿ ಶಿವರಾಜ್ ಕುಮಾರ್

ಬೆಂಗಳೂರು : ವರನಟ ರಾಜ್‍ಕುಮಾರ್ ಕನ್ನಡ ಚಿತ್ರರಂಗದ ಕಣ್ಮಣಿ. ಅಪಾರ ಅಭಿಮಾನಿಗಳ ಆರಾದ್ಯ ದೈವ ಅಣ್ಣಾವ್ರು… ಇದೀಗ ಅಣ್ಣಾವ್ರ ಪುತ್ರ ಶಿವರಾಜ್‍ಕುಮಾರ್ ಅವರ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಶಿವಣ್ಣ ಈ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ದಿ ವಿಲನ್‍ನಲ್ಲಿ ಮತ್ತೆ ರಾಜ್‍ಕುಮಾರ್ ರೀತಿ ಕಾಣಿಸಿಕೊಂಡಿದ್ದಾರೆ ಶಿವಣ್ಣ. ಚಿಕ್ಕಮಗಳೂರಿನಲ್ಲಿ ನಡೆದ ಹಾಡಿನ ಶೂಟಿಂಗ್‍ನಲ್ಲಿ ಶಿವರಾಜ್ ಕುಮಾರ್ ಅಣ್ಣಾವ್ರ ಗೆಟಪ್‍ನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಈ ಹಾಡಿನಲ್ಲಿ ನಟಿ ಆ್ಯಮಿ ಜಾಕ್ಸನ್ ಕೂಡಾ ಪಾಲ್ಗೊಂಡಿದ್ದರು. ಪ್ರೇಮ್ ನಿರ್ದೇಶನ ಮಾಡುತ್ತಿರುವ ದಿ ವಿಲನ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಸುದೀಪ್ ಮತ್ತು ಶಿವರಾಜ್‍ಕುಮಾರ್ ಜೊತೆಯಾಗಿದ್ದು, ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!