Monday , May 21 2018
Home / Film News / ಹಿರಿಯ ನಟಿ ಜೀನತ್ ಅಮಾನ್‍ಗೆ ಉದ್ಯಮಿಯ ಕಾಟ…

ಹಿರಿಯ ನಟಿ ಜೀನತ್ ಅಮಾನ್‍ಗೆ ಉದ್ಯಮಿಯ ಕಾಟ…

ಮುಂಬೈ : ಬಾಲಿವುಡ್‍ನಲ್ಲಿ ಒಂದು ಕಾಲದಲ್ಲಿ ಪಡ್ಡೆ ಹೈಕ್ಲ ನಿದ್ದೆ ಕದ್ದಿದ್ದ ಹಿರಿಯ ನಟಿ ಜೀನತ್ ಅಮಾನ್‍ಗೆ ಈಗ ಉದ್ಯಮಿಯೊಬ್ಬರಿಂದ ಕಾಟ ಶುರುವಾಗಿದೆಯಂತೆ. ಹೀಗಾಗಿ, ಮುಂಬೈಯ ಈ ಉದ್ಯಮಿ ವಿರುದ್ಧ ಜೀನತ್ ಅಮಾನ್ ದೌರ್ಜನ್ಯ ಹಾಗೂ ಹಿಂಬಾಲಿಸಿ ಹಿಂಸೆ ಕೊಡುವ ದೂರು ಕೊಟ್ಟಿದ್ದಾರೆ. ಸೋಮವಾರ ಈ ಬಗ್ಗೆ ದೂರು ದಾಖಲಾಗಿದೆ. ದೂರು ದಾಖಲಾದ ಬಳಿಕ ಈ ಉದ್ಯಮಿ ತಲೆಮರೆಸಿಕೊಂಡಿದ್ದಾಗಿ ಗೊತ್ತಾಗಿದೆ.

ಜೀನತ್ ಮತ್ತು ಈ ಉದ್ಯಮಿ ತುಂಬಾ ದಿನಗಳಿಂದ ಪರಿಚಯಸ್ಥರೇ ಆಗಿದ್ದರಂತೆ. ಆದರೆ, ಇವರಿಬ್ಬರ ಸಂಬಂಧ ಬಳಿಕ ಬಿರುಕು ಬಿಟ್ಟಿತ್ತು. ಇದಾದ ಬಳಿಕ ಜೀನತ್ ಈ ಉದ್ಯಮಿಯೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದರಂತೆ. ಇದಾದ ಬಳಿಕ ಆರೋಪಿ ಉದ್ಯಮಿ ಜೀನತ್ ಅವರಿಗೆ ಪದೇ ಪದೇ ಕರೆ ಮಾಡಿ ಹಿಂಸಿಸುತ್ತಿದ್ದರಂತೆ ಜೊತೆಗೆ ಹಿಂಬಾಲಿಸಿ ಹಿಂಸೆ ಕೊಡುತ್ತಿದ್ದಾರಂತೆ. ಹೀಗೆ ಮಾಡದಂತೆ ಎಷ್ಟು ಹೇಳಿದರೂ ಆ ಉದ್ಯಮಿ ಕೇಳದೇ ಇದ್ದಾಗ ಜೀನತ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಜುಹೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!