Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ಐಸಿಸ್‍ಗೆ ಮಹಿಳೆಯ ಮಾರಾಟ ಯತ್ನ : ಬೆಂಗಳೂರಿನ ಮೂವರು ಸೇರಿ 9 ಮಂದಿ ಬಂಧನ

ಐಸಿಸ್‍ಗೆ ಮಹಿಳೆಯ ಮಾರಾಟ ಯತ್ನ : ಬೆಂಗಳೂರಿನ ಮೂವರು ಸೇರಿ 9 ಮಂದಿ ಬಂಧನ

ಬೆಂಗಳೂರು : ರಕ್ತ ಪಿಪಾಸು ಐಸಿಸ್ ಉಗ್ರ ಸಂಘಟನೆಗೆ ಕೇರಳ ಮೂಲದ ಮಹಿಳೆಯೊಬ್ಬರನ್ನು ಮಾರಾಟ ಮಾಡಲು ಯತ್ನಿಸಿದ 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೂವರು ಬೆಂಗಳೂರಿಗರೂ ಸೇರಿದ್ದಾರೆ. ಬೆಂಗಳೂರಿನ ನಿವಾಸಿಗಳಾದ ದಾನೀಶ್ ನಜೀಬ್, ಇಲಿಯಾಸ್ ಮೊಹಮ್ಮದ್ ಮತ್ತು ಗಾಜಿಲಾ ಬಂಧಿತ ಆರೋಪಿಗಳು. ಇವರೊಂದಿಗೆ ಮೊಹಮ್ಮದ್ ರಿಯಾಸ್ ರಶೀದ್, ನಹಾಸ್ ಅಬ್ದುಲ್ ಖಾದರ್, ಮೊಹಮ್ಮದ್ ನಾಜೀಶ್, ಟಿ.ಕೆ. ಅಬ್ದುಲ್ ಮುಹಾಸಿನ್, ಕೆ. ಫವಾಸ್ ಜಮಾಲ್, ಮೊಯಿನ್ ಪಟೇಲ್ ಎಂಬುವವರನ್ನೂ ಬಂಧಿಸಲಾಗಿದೆ. ಇವರ ವಿರುದ್ಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!