Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / ಸಿರಿವಂತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಸಿರಿವಂತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ನವದೆಹಲಿ : ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನ ಪಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. `ನ್ಯೂ ವಲ್ರ್ಡ್ ವೆಲ್ತ್’ ಈ ವರದಿ ಮಾಡಿದ್ದು, ಭಾರತದ ಒಟ್ಟು ಖಾಸಗಿ ಸಂಪತ್ತು ರೂಪಾಯೊ 534 ಲಕ್ಷ ಕೋಟಿಗಳಿಯಾಗಿದೆ ಎಂದು ಉಲ್ಲೇಖಿಸಿದೆ. ಇದೇ ಪಟ್ಟಿಯಲ್ಲಿ ಭಾರತ ಕಳೆದ ವರ್ಷ ಏಳನೇ ಸ್ಥಾನದಲ್ಲಿತ್ತು. ಇನ್ನು, ಪಟ್ಟಿಯಲ್ಲಿ 64,584 ಡಾಲರ್ ಖಾಸಗಿ ಸಂಪತ್ತಿನ ಮೂಲಕ ಅಮೇರಿಕಾ ಮೊದಲ ಸ್ಥಾನದಲ್ಲಿ ಇದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಪತ್ತಿನ ಲೆಕ್ಕದಲ್ಲಿ ಆಸ್ತಿ, ನಗದು, ಷೇರು, ವಹಿವಾಟುಗಳನ್ನು ಪರಿಗಣಿಸಲಾಗಿದ್ದು, ಸಾಲದ ಮೊತ್ತ ಹಾಗೂ ಸರ್ಕಾರದ ನಿಧಿಗಳನ್ನು ಹೊರಗಿಟ್ಟು ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!