Tuesday , May 22 2018
Home / Film News / “ಲವ್ ಜಿಹಾದ್’ನ ಅಂಶ ಈ ಚಿತ್ರದಲ್ಲಿದೆ. ಹೀಗಾಗಿ, ಚಿತ್ರವನ್ನು ನಿಷೇಧಿಸಿ’

“ಲವ್ ಜಿಹಾದ್’ನ ಅಂಶ ಈ ಚಿತ್ರದಲ್ಲಿದೆ. ಹೀಗಾಗಿ, ಚಿತ್ರವನ್ನು ನಿಷೇಧಿಸಿ’

ತಿರುವನಂತಪುರಂ : ನಟಿ ಮಂಜು ವಾರಿಯರ್ ಅಭಿನಯದ ಮಲಯಾಳಂ ಚಿತ್ರ `ಅಮಿ’ಗೆ ಈಗ ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ಲವ್ ಜಿಹಾದ್‍ಗೆ ಪ್ರೋತ್ಸಾಹಿಸುವ ಅಂಶ ಇದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಚಿತ್ರಕ್ಕೆ ನಿಷೇಧ ಹೇರಬೇಕು ಎಂದು ಕೇರಳ ಹೈಕೋರ್ಟ್‍ಗೆ ಮನವಿಯೊಂದು ಸಲ್ಲಿಕೆಯಾಗಿದೆ. ಅಲ್ಲದೆ, ಸೆನ್ಸಾರ್ ಮಂಡಳಿಗೆ ಈ ಚಿತ್ರಕ್ಕೆ ಸರ್ಟಿಫಿಕೇಟ್ ನೀಡದಂತೆ ನಿರ್ದೇಶನ ನೀಡಬೇಕೆಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಎಡಪಲ್ಲಿಯ ವಕೀಲ ಕೆ.ಆರ್.ರಾಮಚಂದ್ರನ್ ಈ ಅರ್ಜಿ ಸಲ್ಲಿಸಿದ್ದಾರೆ. ಕಮಲಾದಾಸ್ ಅವರ ಆತ್ಮಕತೆಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗುತ್ತಿದೆ. ಕಮಲಾ ಅವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಇನ್ನೇನು ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಈ ಅರ್ಜಿ ಸಲ್ಲಿಕೆಯಾಗಿದ್ದು ಚಿತ್ರತಂಡಕ್ಕೆ ಸಂಕಷ್ಟ ತಂದಿದೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!