Monday , February 19 2018
Home / Film News / ಕಿಚ್ಚ ಸುದೀಪ್ 22 ವರ್ಷಗಳ ಸಿನಿ ಪಯಣ : ಅಭಿಮಾನಿಗಳಿಗೆ ಪ್ರೀತಿಯ ಪತ್ರ…
Buy Bitcoin at CEX.IO

ಕಿಚ್ಚ ಸುದೀಪ್ 22 ವರ್ಷಗಳ ಸಿನಿ ಪಯಣ : ಅಭಿಮಾನಿಗಳಿಗೆ ಪ್ರೀತಿಯ ಪತ್ರ…

ಬೆಂಗಳೂರು : ಕಿಚ್ಚ ಸುದೀಪ್ ಸಿನಿಲೋಕಕ್ಕೆ ಬಂದು ಅಮೋಘ 22 ವರ್ಷ… 1996ರ ಜನವರಿ 31ರಲ್ಲಿ `ಬ್ರಹ್ಮ’ ಎಂಬ ಚಿತ್ರಕ್ಕೆ ಮೊದಲ ಬಾರಿಗೆ ಸುದೀಪ್ ಬಣ್ಣ ಹಚ್ಚಿದ್ದರು… ಇದಾದ ಬಳಿಕ ಸುದೀಪ್ ಬೆಳೆದ ರೀತಿ ಈಗ ಇತಿಹಾಸ. ಕನ್ನಡ ಮಾತ್ರವಲ್ಲದೆ. ಟಾಲಿವುಡ್, ಕಾಲಿವುಡ್, ಬಾಲಿವುಡ್, ಹಾಲಿವುಡ್‍ನಲ್ಲೂ ಕಿಚ್ಚನ ಸಾಧನೆಯ ಹೆಜ್ಜೆ ಗುರುತುಗಳಿವೆ. ಕನ್ನಡದ ಕುವರ ಇಡೀ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಹಲವರ ಆರಾದ್ಯ ಮೂರ್ತಿಯಾಗಿದ್ದಾರೆ. ಚಿತ್ರರಂಗದ ಜೊತೆಗೆ ಹಲವು ಜನಪರ ಕಾರ್ಯಗಳನ್ನೂ ಮಾಡುತ್ತಲೂ ಸುದೀಪ್ ಗಮನ ಸೆಳೆದಿದ್ದಾರೆ. ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹದ ಧಾರೆಯಾಗಿದ್ದಾರೆ. ಅಭಿನಯ ಚಕ್ರವರ್ತಿ ಎಂಬ ಬಿರುದು ಈಗ ಕಿಚ್ಚನಿಗೆ ಸಂದಿದೆ. ಈ ಪ್ರೀತಿಗೆ ಕಿಚ್ಚ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ… ಈ ಸಾಧನೆಯ ಪಯಣ ಈಗ ಇದೇ ವಿಶ್ವಾಸ, ಹೆಮ್ಮಯೊಂದಿಗೆ ಮುಂದೆ ಸಾಗುತ್ತಿದೆ. ಕಿಚ್ಚ ಬರೆದಿರುವ ಪತ್ರ ಇಲ್ಲಿದೆ ನೋಡಿ… (ಇಲ್ಲಿ ಕ್ಲಿಕ್ ಮಾಡಿ : sudeep)

ಸುದೀಪ್ ಪತ್ರ ಸಾರಾಂಶ : 1996 ಜನವರಿ 31… `ಬ್ರಹ್ಮ’… ನಾನು ಮೊದಲ ಬಾರಿಗೆ ಬಣ್ಣ ಹಚ್ಚಿದ ಕ್ಷಣ ಅದು.
ಈ ಚಿತ್ರದಿಂದಲೇ ಸಿನಿ ಲೋಕದಲ್ಲಿ ಅದ್ಭುತ ಪಯಣ ಆರಂಭವಾಗಿತ್ತು. ನನ್ನ ತಂದೆ ಹಾಗೂ ಸ್ನೇಹಿತರೊಂದಿಗೆ ಶೂಟಿಂಗ್ ಸ್ಥಳಕ್ಕೆ ಹೋಗುತ್ತಿದ್ದಾಗ `ಆ್ಯಕ್ಷನ್ ಕಟ್’ ಎಂಬ ಪದಗಳನ್ನು ಕೇಳುತ್ತಲೇ ಇದೆ. ಆದರೆ, ನಾನು ಕೂಡಾ ಈ `ಆ್ಯಕ್ಷನ್ ಕಟ್’ನ ಭಾಗವಾದಾಗ ಆಗುವ ಅನುಭವವೇ ಪದಗಳಲ್ಲಿ ಬಣಿಸಲು ಅಸಾಧ್ಯವಾದುದು. ನನ್ನ ದೊಡ್ಡ ಅಣ್ಣನಿಂದ ಆಶೀರ್ವಾದ ಪಡೆಯುವ ಸನ್ನಿವೇಶ ಅದು. ಅಂಬರೀಷ್ ಮಾಮ ಅಣ್ಣನ ಪಾತ್ರ ಮಾಡಿದ್ದರು.
ಇದು ತುಂಬಾ ಸರಳ ದೃಶ್ಯ. ಆದರೆ, ನನ್ನ ಪಾಲಿಗೆ ಅದು ಸರಳ ದೃಶ್ಯವಾಗಿರಲಿಲ್ಲ. ಅನೇಕ ಟೇಕ್‍ಗಳನ್ನು ನಾನು ತೆಗೆದುಕೊಂಡಿದ್ದೆ.
ಈ ವೇಳೆ, ಹಲವರು ನನ್ನ ಸಾಮಥ್ರ್ಯದ ಮೇಲೆ ಸಂಶಯ ಅನುಮಾನಪಟ್ಟಿರಬಹುದು.  ಆದರೆ, ಅಂದಿನಿಂದ ಆರಂಭವಾದ ಈ ಪಯಣದಲ್ಲಿ ಈಗ ಎಲ್ಲವೂ ಸರಿಯಾಗಿದೆ. ಇದೇ ಹಾದಿಯಲ್ಲಿ ಸುದೀರ್ಘ ದೂರವನ್ನೂ ಸಾಗಿದ್ದೇನೆ. 22 ವರ್ಷ ಸರಿದಿದೆ. ಸಿನೆಮಾಗೆ ಹೇಗೆ ಧನ್ಯವಾದ ಹೇಳಬೇಕೆಂದೇ ಗೊತ್ತಾಗುತ್ತಿಲ್ಲ. ನನ್ನ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಿಬ್ಬಂದಿ, ಸಹೋದ್ಯೋಗಿಗಳು, ಮಾಧ್ಯಮ, ವಿತರಕರು, ಪ್ರದರ್ಶಕರು ಹೀಗೆ ನನ್ನ ಸಿನಿ ಜರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ನಾನು ಕೃತಜ್ಞ.  ಸಿನೆಮಾ ನನ್ನ ಬದುಕಿನ ಅತ್ಯಂತ ಸುಂದರ ಕ್ಷಣ. ನಾನು ಇವತ್ತು ಏನಾಗಿದ್ದೇನೋ ಅದೆಲ್ಲಾ ನೀವು ನನಗೆ ಕೊಟ್ಟ ಉಡುಗೊರೆ. ಧನ್ಯವಾದಗಳು ನಿಮಗೆ. ನನ್ನ ಜೊತೆ ನಿಂತಿದ್ದಕ್ಕೆ ನನ್ನ ಕುಟುಂಬಕ್ಕೂ ನಾನು ಧನ್ಯವಾದ ಸಲ್ಲಿಸಬೇಕು. ಅವರು ನನಗಾಗಿ ಮಾಡಿದ ತ್ಯಾಗಕ್ಕೂ ಬೆಲೆಕಟ್ಟಲಾಗದು. ನಾನು ಸೋತಾಗ ನನ್ನ ಬೆಂಬಲಕ್ಕೆ ನಿಂತ ಚಿತ್ರರಂಗಕ್ಕೂ ನಾನು ಅಭಾರಿ ಮತ್ತು ಚಿತ್ರರಂಗದ ಸೇವೆಗೆ ನಾನು ಸದಾ ಸಿದ್ಧ.

CEX.IO Bitcoin Exchange

About sudina

Check Also

ಸುಪ್ರೀಂಕೋರ್ಟ್​ ತೀರ್ಪು ಬೇಸರ ತರಿಸಿದೆ : ರಜನಿಕಾಂತ್

ಚೆನ್ನೈ : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಬೇಸರ ತರಿಸಿದೆ ಎಂದು ಸೂಪರ್ …

Leave a Reply

Your email address will not be published. Required fields are marked *

error: Content is protected !!