Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / ಕಮಲ್ ಹಾಸನ್‍ಗೆ ನಯನಾತಾರಾ ನಾಯಕಿ…?

ಕಮಲ್ ಹಾಸನ್‍ಗೆ ನಯನಾತಾರಾ ನಾಯಕಿ…?

ಚೆನ್ನೈ : ಯಶಸ್ವಿ ಇಂಡಿಯನ್ ಚಿತ್ರದ ಎರಡನೇ ಭಾಗದ ತಯಾರಿಗೆ ನಿರ್ದೇಶಕ ಶಂಕರ್ ಮತ್ತು ಕಮಲ್ ಹಾಸನ್ ನಿರ್ಧರಿಸಿದ್ದಾರೆ. ಈ ವರ್ಷದಲ್ಲೇ ಇಂಡಿಯನ್ 2 ಸೆಟ್ಟೇರಲಿದೆ. ಎರಡು ದಶಕಗಳ ಬಳಿಕ ಇಂಡಿಯನ್ ಚಿತ್ರದ ಎರಡನೇ ಭಾಗ ಸಿದ್ಧವಾಗುತ್ತಿದೆ. ಈಗಾಗಲೇ ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಆದರೆ, ಈ ಚಿತ್ರದಲ್ಲಿ ಕಮಲ್ ಹಾಸನ್ ಅವರಿಗೆ ನಾಯಕಿ ಯಾರು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಈ ಪ್ರಶ್ನೆಯ ಬೆನ್ನಲ್ಲೇ ಲೇಡಿ ಸೂಪರ್ ಸ್ಟಾರ್ ನಯನಾತಾರಾ ಹೆಸರು ಕೂಡಾ ಕೇಳಿ ಬರುತ್ತಿದೆ. ಸದ್ಯ ಈ ಚಿತ್ರದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ವರ್ಷಾಂತ್ಯದಲ್ಲಿ ಚಿತ್ರ ಬಿಡುಗಡೆಯ ಸಾಧ್ಯತೆ ಇದೆ. ಸದ್ಯ ಶಂಕರ್ ರಜನಿಕಾಂತ್ ಅಭಿನಯದ 2.0 ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಿಡುಗಡೆಯ ಸಿದ್ಧತೆಯ ಜೊತೆಜೊತೆಗೇ ಇಂಡಿಯನ್ 2 ಚಿತ್ರದ ಸಿದ್ಧತೆಯೂ ಜೋರಾಗಿಯೇ ನಡೆಯುತ್ತಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!