Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / ಹೆಂಡ್ತಿ ಮನೆಯಲ್ಲೇ ಕದ್ದ ಆರೋಪ : ಟಾಲಿವುಡ್ ನಟನ ಬಂಧನ…!

ಹೆಂಡ್ತಿ ಮನೆಯಲ್ಲೇ ಕದ್ದ ಆರೋಪ : ಟಾಲಿವುಡ್ ನಟನ ಬಂಧನ…!

ಹೈದರಾಬಾದ್ : ತೆಲುಗು ನಟ ಸಾಮ್ರಾಟ್ ರೆಡ್ಡಿಯನ್ನುಪೊಲೀಸರು ಬಂಧಿಸಿದ್ದಾರೆ. ತನ್ನಿಂದ ದೂರವಾಗಿರುವ ಪತ್ನಿ ಮನೆಗೆ ಅಕ್ರಮ ಪ್ರವೇಶ ಹಾಗೂ ಕದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. ಕೆ.ಹರಿತಾ ರೆಡ್ಡಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಜಿವಿಎಸ್ ಕೃಷ್ಣ ರೆಡ್ಡಿ ಅಲಿಯಾಸ್ ಸಾಮ್ರಾಟ್ ರೆಡ್ಡಿ ಮದಾಪುರದಲ್ಲಿರುವ ಹರಿತಾ ಅವರ ಫ್ಲಾಟ್​ಗೆ ನುಗ್ಗಿ ಗಲಾಟೆ ಮಾಡಿದ್ದಾರಂತೆ. ಜೊತೆಗೆ, ಬಾಗಿಲು ಒಡೆದು ಒಳ ಪ್ರವೇಶಿಸಿದ ಸಾಮ್ರಾಟ್ ಮನೆ ವಸ್ತುಗಳನ್ನು ಕದ್ಕೊಂಡು ಹೋಗಿದ್ದು, ಸಿಸಿ ಕ್ಯಾಮರಾಕ್ಕೂ ಹಾನಿ ಮಾಡಿದ್ದಾರಂತೆ. ಸಿಸಿ ಕ್ಯಾಮೆರಾದ ಡಿವಿಆರ್ ಕೂಡಾ ಕೊಂಡೊಯ್ದಿದ್ದಾರಂತೆ. ಜನವರಿ 13 ರಂದು ತಾನು ಮನೆಯಲ್ಲಿ ಇಲ್ಲದ ವೇಳೆ ಸಾಮ್ರಾಟ್ ಮತ್ತು ಅವರ ಸಹೋದರಿ ಸಾಹಿತಿ ರೆಡ್ಡಿ ಮನೆಗೆ ಬಂದು ಕಳ್ಳತನ ಮಾಡಿದ್ದಾರೆ ಎಂದು ಹರಿತಾ ದೂರಿದ್ದಾರೆ. ಸದ್ಯ ಪೊಲೀಸರು ಸಾಮ್ರಾಟ್​ರನ್ನು ಬಂಧಿಸಿದ್ದು, ಸಾಹಿತಿ ರೆಡ್ಡಿಗೂ ಬಲೆ ಬೀಸಿದ್ದಾರೆ. ಸಾಹಿತಿ ಸದ್ಯ ಗೋವಾದಲ್ಲಿ ಇದ್ದಾರೆ ಎಂದು ಗೊತ್ತಾಗಿದೆ.

20105 ರಲ್ಲಿ ಸಾಮ್ರಾಟ್ ಮತ್ತು ಹರಿತಾ ವಿವಾಹವಾಗಿದ್ದರು. ಆದರೆ, ಬಳಿಕ ಇವರ ಸಂಸಾರದಲ್ಲಿ ಬಿರುಕುಂಟಾಗಿತ್ತು. ಸಾಮ್ರಾಟ್ ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಬಳಿಕ ನ್ಯಾಯಾಲಯ ಸಾಮ್ರಾಟ್​ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇನ್ನು, ಸಾಮ್ರಾಟ್ ಮಾದಕ ದ್ರವ್ಯ ವಸನಿಯಾಗಿದ್ದು, ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದೂ ಹರಿತಾ ಆರೋಪ ಮಾಡಿದ್ದಾರೆ. ಆದ್ರೆ, ಈ ಎಲ್ಲಾ ಆರೋಪಗಳನ್ನು ಸಾಮ್ರಾಟ್ ಅಲ್ಲಗಳೆದಿದ್ದಾರೆ. ಇದೆಲ್ಲಾ ಹುರುಳಿಲ್ಲದ ಆರೋಪ ಎಂದು ಅವರು ಹೇಳಿದ್ದಾರೆ.

About sudina

Check Also

ಬಾಂಬ್ ಬ್ಲಾಸ್ಟ್ ಆದ ಹೊಟೇಲ್‍ನಲ್ಲೇ ಇದ್ದರು ಈ ಖ್ಯಾತ ನಟಿ…!

ಕೊಲೊಂಬೋ : ಶ್ರೀಲಂಕಾದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ… ಮೂರು ಪವಿತ್ರ ಚರ್ಚ್‍ಗಳು ಹಾಗೂ ಮೂರು ಫೈವ್ ಸ್ಟಾರ್ ಹೊಟೇಲ್‍ನಲ್ಲಿ …

Leave a Reply

Your email address will not be published. Required fields are marked *

error: Content is protected !!