Sunday , February 17 2019
ಕೇಳ್ರಪ್ಪೋ ಕೇಳಿ
Home / Film News / `ಹೆಬ್ಬುಲಿ’ ಬೆಡಗಿಗೆ ಲೈಂಗಿಕ ದೌರ್ಜನ್ಯ… : 40 ವರ್ಷದ ಉದ್ಯಮಿ ಬಂಧನ

`ಹೆಬ್ಬುಲಿ’ ಬೆಡಗಿಗೆ ಲೈಂಗಿಕ ದೌರ್ಜನ್ಯ… : 40 ವರ್ಷದ ಉದ್ಯಮಿ ಬಂಧನ

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ಸ್ಯಾಂಡಲ್‍ವುಡ್‍ನಲ್ಲಿ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರ `ಹೆಬ್ಬುಲಿ’ಯ ನಾಯಕಿ ಅಮಲಾ ಪೌಲ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಬಗ್ಗೆ ತಮಿಳುನಾಡಿನ ಟಿ.ನಗರ್ ಪೊಲೀಸ್ ಠಾಣೆಯಲ್ಲಿ ಅಮಲಾ ದೂರು ನೀಡಿದ್ದಾರೆ. ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಅಮಲಾ ಮೇಲೆ ದೌರ್ಜನ್ಯವೆಸಗಿದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಡಿನ ರಿಹರ್ಸಲ್ ನಡೆಯುತ್ತಿದ್ದ ಸಂದರ್ಭದಲ್ಲಿ ಬಂದ 40 ವರ್ಷದ ಉದ್ಯಮಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅಮಲಾ ದೂರಿನಲ್ಲಿ ವಿವರಿಸಿದ್ದಾರೆ. ಜೊತೆಗೆ, ಮಾಧ್ಯಮಗಳಿಗೂ ಈ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.

`ಮಲೇಷ್ಯಾದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕಾಗಿ ನಾನು ರಿಹರ್ಸಲ್ ಮಾಡುತ್ತಿದ್ದೆ. ಈ ವೇಳೆ, ಆ ವ್ಯಕ್ತಿ ಅಲ್ಲಿಗೆ ಬಂದು ನನ್ನೊಂದಿಗೆ ಮಾತನಾಡುವುದಕ್ಕೆ ಆರಂಭಿಸಿದರು. ಕಾರ್ಯಕ್ರಮಕ್ಕೆ ಸಂಬಂಧಪಟ್ಟ ವ್ಯಕ್ತಿಯಂತೆ ಅವರು ಮಾತನಾಡುತ್ತಿದ್ದರು. ಇದಾದ ಬಳಿಕ ನಾನು ಒಂಟಿಯಾಗಿದ್ದ ಸಂದರ್ಭದಲ್ಲಿ ಮತ್ತೆ ಬಂದ ಆ ವ್ಯಕ್ತಿ ಏನೇನೋ ಮಾತನಾಡಲು ಆರಂಭಿಸಿದ್ದರು. ಆ ವ್ಯಕ್ತಿಯ ಮಾತು ಸೆಕ್ಸುವಲ್ ಟ್ರೇಡಿಂಗ್ ದಾಟಿಯಲ್ಲಿ ಇತ್ತು. ಹೀಗಾಗಿ, ನಾನು ಪೊಲೀಸರಿಗೆ ದೂರು ನೀಡಿದ್ದೇನೆ.’ ಎಂದು ಅಮಲಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಕಾಲಿವುಡ್‍ನ ಕೊರಿಯೋಗ್ರಾಫರ್ ಶ್ರೀಧರ್ ಅವರ ಡ್ಯಾನ್ಸ್ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ನನ್ನಂತೆ ಇತರರಿಗೆ ಇದೇ ರೀತಿಯ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಈ ದೂರು ನೀಡಿದ್ದೇನೆ ಎಂದೂ ಅಮಲಾ ತಿಳಿಸಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!