ಮುಂಬೈ : ಟ್ವಿಟರ್ನಲ್ಲಿ ಫಾಲೋವರ್ಗಳ ಸಂಖ್ಯೆ ಈಗ ಬಾಲಿವುಡ್ನ ಇಬ್ಬರು ದಿಗ್ಗಜರಾದ ಅಮಿತಾಭ್ ಮತ್ತು ಶಾರೂಖ್ ಖಾನ್ ನಡುವೆ ಸಣ್ಣದೊಂದು ಕಲಹಕ್ಕೆ ಕಾರಣವಾಗಿದೆಯಾ? ಅಥವಾ ಅಮಿತಾಭ್ ಬರೀ ಜೋಕ್ ಮಾಡಿದ್ದಾರಾ…? ಹೀಗೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಸ್ವತಃ ಅಮಿತಾಭ್ ಅವರ ಟ್ವಿಟ್. ತೆರೆ ಮಾತ್ರ ಅಲ್ಲ. ಟ್ವಿಟರ್ನಲ್ಲೂ ಯಾವತ್ತೂ ಅಮಿತಾಭ್ ಸ್ಟಾರ್ ಆಗಿದ್ದವರು. ಆದರೆ, ಈಗ ಶಾರೂಖ್ ಖಾನ್ ಟ್ವಿಟರ್ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಮಿತಾಭ್ ಅವರಿಗಿಂತ ಶಾರೂಖ್ ಫಾಲೋವರ್ಗಳ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ `ಆಂಗ್ರಿ ಯಂಗ್ ಮ್ಯಾನ್’ ಸಿಟ್ಟಾಗಿದ್ದಾರಂತೆ…!
T 2599 – TWITTER ..!!!?? you reduced my number of followers .. !!??HAHAHAHAHAHAHA .. !! thats a joke .. time to get off from you .. thank you for the ride .. 😠😠😠 .. there are many ‘other’ fish in the sea – and a lot more exciting !! pic.twitter.com/85c15pDif4
— Amitabh Bachchan (@SrBachchan) January 31, 2018
ಶಾರೂಖ್ ಖಾನ್ ಅವರ ಟ್ವಿಟರ್ ಖಾತೆಯನ್ನು 32,944,338 ಜನ ಫಾಲೋ ಮಾಡ್ತಿದ್ದಾರೆ. ಇನ್ನು, ಅಮಿತಾಭ್ ಅವರ ಖಾತೆಯನ್ನು 32,902,353 ಅಭಿಮಾನಿಗಳು ಫಾಲೋ ಮಾಡ್ತಿದ್ದಾರೆ. ಇನ್ನು ಕಂಡ ಅಮಿತಾಭ್ ಟ್ವಿಟರ್ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ… ತಮಾಷೆಯ ದಾಟಿಯಲ್ಲೇ ಅಮಿತಾಭ್ ಮಾತನಾಡಿದ್ದಾರೆ. ಅಲ್ಲದೆ, `ಇದು ಟ್ವಿಟರ್ನಿಂದ ದೂರ ಆಗುವ ಕಾಲ’ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಜೊತೆಗೆ, ಜನರಿಗೂ ಧನ್ಯವಾದ ಹೇಳಿದ್ದಾರೆ. ಜೊತೆಗೆ ತಮ್ಮ ಹಳೆಯ ದಿನಗಳನ್ನೂ ಮೆಲುಕು ಹಾಕಿಕೊಂಡಿದ್ದಾರೆ…
T 2599 – 27 YEARS of ‘HUM’ .. BAADDUUMMBAAAAA !!! Amazing times and most importantly the creation of the song ‘Jumma Chumma’ by me .. Rajni with me and Govinda .. and of course the Filmfare award !! good times .. good vibrations .. good all along pic.twitter.com/aM40War9p6
— Amitabh Bachchan (@SrBachchan) January 31, 2018