Monday , December 10 2018
ಕೇಳ್ರಪ್ಪೋ ಕೇಳಿ
Home / Film News / ಅಮರೀಷ್ ಪುರಿ ಅವರ ಪುತ್ರಿಯನ್ನು ನೋಡಿದ್ದೀರಾ…? : ಇವರು ಬೇರೆ ಸ್ಟಾರ್‍ಗಳ ಮಕ್ಕಳಂತಲ್ಲ…!

ಅಮರೀಷ್ ಪುರಿ ಅವರ ಪುತ್ರಿಯನ್ನು ನೋಡಿದ್ದೀರಾ…? : ಇವರು ಬೇರೆ ಸ್ಟಾರ್‍ಗಳ ಮಕ್ಕಳಂತಲ್ಲ…!

ಮುಂಬೈ : ಅಮರೀಷ್ ಪುರಿ ಭಾರತ ಸಿನೆಮಾ ಲೋಕದಲ್ಲಿ ದೊಡ್ಡ ಹೆಸರು. ಹಿಂದಿ ಚಿತ್ರರಂಗದಲ್ಲಿ ವಿಲನ್ ಪಾತ್ರಗಳಿಂದಲೇ ಹೆಸರು ಗಳಿಸಿದವರು ಅಮರೀಷ್. 1967 ರಿಂದ 2005 ರವರೆಗೆ ಇವರು ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಮನಗೆದ್ದಿದ್ದಾರೆ. ಬಾಲಿವುಡ್‍ನ ಈ ಸಕ್ಸಸ್‍ಫುಲ್ ವಿಲನ್ ನಮ್ಮೊಂದಿಗೆ ಇಲ್ಲ ನಿಜ. ಆದರೆ, ಅವರ ಪಾತ್ರಗಳು ಇಂದಿಗೂ ಹಚ್ಚ ಹಸುರು. ನೆನಪು ಕೂಡಾ ಶಾಶ್ವತ… ಇಂತಹ ಸ್ಟಾರ್ ನಟನ ಮಗಳು ಕೂಡಾ ಅಪ್ಪನಂತೆ ಡಿಫ್ರೆಂಟ್… ಅಮರೀಷ್ ಪುರಿ ಅವರ ಪುತ್ರಿಯ ಹೆಸರು ನಮೃತಾ ಪುರಿ. ಇವರು ಈಗಲೂ ಎಲೆಮರೆಕಾಯಿಯಂತೆಯೇ ಜೀವನ ನಡೆಸುತ್ತಿದ್ದಾರೆ. ಬೇರೆ ಸ್ಟಾರ್ ನಟ ನಟಿಯರ ಮಕ್ಕಳಂತೆ ನಮೃತಾ ಇಲ್ಲ. ಇವರು ತುಂಬಾ ಸರಳ ಜೀವನವನ್ನೇ ಈಗ ನಡೆಸುತ್ತಿದ್ದಾರೆ. ನಮೃತಾ ಸಾಫ್ಟ್‍ವೇರ್ ಎಂಜಿನಿಯರ್. ಬಾಲಿವುಡ್‍ನ ಇತರ ಸ್ಟಾರ್ ಕಲಾವಿದರ ಮಕ್ಕಳಂತೆ ಇವರಿಗೆ ಚಿತ್ರರಂಗದಲ್ಲಿ ಬೆಳೆಯುವ ಆಸೆ ಇಲ್ಲ. ಹೀಗಾಗಿ, ಇವರು ಬಣ್ಣದ ಲೋಕದಿಂದ ದೂರವೇ ಇದ್ದಾರೆ. ಮಾಧ್ಯಮಗಳಿಂದಲೂ ದೂರವೇ ಉಳಿದಿದ್ದಾರೆ…

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!