Thursday , June 21 2018
ಕೇಳ್ರಪ್ಪೋ ಕೇಳಿ
Home / Film News / `ಅಯ್ಯೋಗ್ಯ’ ಚಿತ್ರದಲ್ಲಿ ರವಿಶಂಕರ್ ಖಡಕ್ ಲುಕ್

`ಅಯ್ಯೋಗ್ಯ’ ಚಿತ್ರದಲ್ಲಿ ರವಿಶಂಕರ್ ಖಡಕ್ ಲುಕ್

ಬೆಂಗಳೂರು : ನಟ ರವಿಶಂಕರ್ ಇತ್ತೀಚಿನ ದಿನಗಳಲ್ಲಿ ಡಿಫ್ರೆಂಟ್ ಡಿಫ್ರೆಂಟ್ ರೋಲ್ ಮಾಡ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿದ್ದ ಕಾಲೇಜು ಕುಮಾರ ಚಿತ್ರದಲ್ಲಿ ರವಿಶಂಕರ್ ಅವರದ್ದು ವಿಭಿನ್ನ ಪಾತ್ರ. ಬಿಡುಗಡೆಗೆ ಸಿದ್ಧವಾಗುತ್ತಿರುವ ರಾಜರಥದಲ್ಲೂ ರವಿ ಅವರದ್ದು ಡಿಫ್ರೆಂಟ್ ರೋಲ್. ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ರವಿಶಂಕರ್ ಬರುತ್ತಿದ್ದಾರೆ. `ಅಯ್ಯೋಗ್ಯ’ ಚಿತ್ರದಲ್ಲಿ ಬಚ್ಚೇಗೌಡ ಪಾತ್ರವನ್ನು ರವಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ರವಿ ಅವರದ್ದು ನೆಗೆಟಿವ್ ರೋಲ್. ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಅಭಿನಯದ ಚಿತ್ರವಿದು. ಮಹೇಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಎರಡನೇ ಹಂತದ ಶೂಟಿಂಗ್ ಭರದಿಂದ ಸಾಗಿದೆ.

 

About sudina

Check Also

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ

ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯ ನೇಮಕವಾಗಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. …

Leave a Reply

Your email address will not be published. Required fields are marked *

error: Content is protected !!