Thursday , November 15 2018
ಕೇಳ್ರಪ್ಪೋ ಕೇಳಿ
Home / Interval / ‘ಅಮರ್ ಅಕ್ಬರ್ ಅಂಥೋನಿ’ ಚಿತ್ರದ ಕತೆ ಹುಟ್ಟಿದ್ದು ಹೇಗೆ ಗೊತ್ತಾ…?

‘ಅಮರ್ ಅಕ್ಬರ್ ಅಂಥೋನಿ’ ಚಿತ್ರದ ಕತೆ ಹುಟ್ಟಿದ್ದು ಹೇಗೆ ಗೊತ್ತಾ…?

ಅದು 70ರ ದಶಕ. ನಿರ್ದೇಶಕ ಮನ್ಮೋಹನ್ ದೇಸಾಯಿ ಬೆಳಗ್ಗೆ ಪೇಪರ್ ಓದುತ್ತಿದ್ದರು. ಈ ವೇಳೆ. ಒಂದು ಸುದ್ದಿ ದೇಸಾಯಿ ಅವರನ್ನು ಬಹುವಾಗಿ ಕಾಡಲಾರಂಭಿಸಿತ್ತು. ಆ ಸುದ್ದಿ ಏನಂದ್ರೆ ಒಬ್ಬ ವ್ಯಕ್ತಿ ತನ್ನ ಮೂವರು ಮಕ್ಕಳನ್ನು ಪಾರ್ಕಿಗೆ ಕರೆದ್ಕೊಂಡು ಬಂದು ಅವರನ್ನು ಅಲ್ಲೇ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ! ಈ ಸುದ್ದಿ ಮನ್ಮೋಹನ್ ದೇಸಾಯಿ ಅವರನ್ನು ತುಂಬಾ ಕಾಡುವುದಕ್ಕೆ ಆರಂಭಿಸಿತ್ತು. ದಿನವಿಡೀ ದೇಸಾಯಿ ಅವರು ಇದೇ ಸುದ್ದಿಯ ಬಗ್ಗೆ ಯೋಚನೆ ಮಾಡ್ತಾ ಕುಳಿತಿದ್ದರು.

ಹೀಗೆ ಚಿಂತಿಸುತ್ತಲೇ ಇದ್ದಾಗ ಸಂಜೆ ದೇಸಾಯಿ ಅವರು ತಮ್ಮ ಬರಹಗಾರ ಪ್ರಯಾಗ್ ರಾಜ್ ಅವರನ್ನು ಭೇಟಿಯಾದರು. ಪ್ರಯಾಗ್ ರಾಜ್ ಬಳಿಯೂ ಇದೇ ಸುದ್ದಿಯ ಬಗ್ಗೆ ಇವರು ಚರ್ಚಿಸಿದರು.’ಒಂದೊಮ್ಮೆ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳದೇ ಇದ್ದು, ಪಾರ್ಕಿಗೆ ವಾಪಸ್ ಬಂದಾಗ ಅಲ್ಲಿ ಮಕ್ಕಳು ಇಲ್ಲದೇ ಇರೋದನ್ನು ಕಂಡು ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದರು’ ಎಂದು ಯೋಚಿಸಿ ಎಂದು ದೇಸಾಯಿ ಪ್ರಯಾಗ್ ರಾಜ್ ಅವರನ್ನು ಹೇಳಿಕೊಂಡಿದ್ದರು. ಇಬ್ಬರೂ ಈ ಬಗ್ಗೆ ಚರ್ಚೆ ಮಾಡ್ತಾನೆ ಇದ್ದರು.

ಆಗ ಪ್ರಯಾಗ್ ರಾಜ್ ಅವರು ‘ಈ ಮಕ್ಕಳನ್ನು ಮೂರು ಬೇರೆ ಬೇರೆ ಧರ್ಮದ ವ್ಯಕ್ತಿಗಳು ಕೊಂಡು ಹೋದರೆ ಹೇಗೆ ಆಗುತ್ತಿತ್ತು’ ಎಂದು ಹೇಳಿದ್ರು.ಇವರ ಈ ಮಾತೇ ಕತೆಯ ರೂಪಕ್ಕೆ ತಿರುಗಲಾರಂಭಿಸಿತ್ತು. ತಡರಾತ್ರಿ ವರೆಗೂ ಇವರದ್ದು ಇದೇ ಚರ್ಚೆ. ಮತ್ತೆ ಮರುದಿನ ಮತ್ತೆ ಜೊತೆಯಾದ ಈ ಇಬ್ಬರು ಇದೇ ಕತೆಯ ಬಗ್ಗೆ ಇನ್ನಷ್ಟು ಚರ್ಚೆ ಶುರು ಮಾಡಿದ್ದರು. ಇವರಿಬ್ಬರಿಗೆ ಮನ್ಮೋಹನ್ ದೇಸಾಯಿ ಅವರ ಪತ್ನಿ ಜೀವನ್ ಪ್ರಭಾ ಕೂಡಾ ಜೊತೆಯಾದರು. ನೋಡ ನೋಡುತ್ತಿದ್ದಂತೆಯೇ ಅದ್ಭುತ ಕತೆಯೊಂದು ಸಿದ್ಧವಾಯ್ತು.

ಈ ಟೈಮ್ನಲ್ಲಿ ಪ್ರಯಾಗ್ ರಾಜ್ ಅವರು ಮನ್ಮೋಹನ್ ದೇಸಾಯಿ ಅವರಿಗೆ ಒಂದು ಷರತ್ತು ವಿಧಿಸಿದರು. ‘ನಾನು ನಿಮಗೆ ಕತೆ ಬರೆಯುತ್ತೇನೆ. ಆದರೆ, ಈ ಚಿತ್ರವನ್ನು ನೀವೇ ನಿರ್ದೇಶಿಸಿ, ನೀವೇ ನಿರ್ಮಿಸಬೇಕು. ಇಷ್ಟು ದಿನ ಅದ್ಭುತ ಚಿತ್ರಗಳಿಂದ ನೀವು ಬೇರೆ ನಿರ್ಮಾಪಕರ ಜೇಬು ತುಂಬಿಸಿದ್ದು ಸಾಕು. ಈಗ ನೀವೇ ನಿರ್ಮಾಪಕರಾಗಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಿ’ ಎಂಬ ಷರತ್ತು ಅದು. ತುಂಬಾ ಯೋಚನೆ ಮಾಡಿದ ಬಳಿಕ ದೇಸಾಯಿ ಅವರೂ ಒಪ್ಪಿಕೊಂಡರು.

ಇದಾದ ಬಳಿಕ ಪ್ರಯಾಗ್ ರಾಜ್, ಖಾದರ್ ಖಾನ್, ಕೆಕೆ ಶುಕ್ಲಾ ಸಿನೆಮಾದ ಕತೆ ಬರೆಯುವುದಕ್ಕೆ ಸಜ್ಜಾದರು. ಹೀಗೆ, ಒಂದು ಸುಂದರ ಚಿತ್ರ ‘ಅಮರ್ ಅಕ್ಬರ್ ಅಂಥೋನಿ’ ಸಿದ್ಧವಾಗಿತ್ತು. ಬಾಲಿವುಡ್ ಇತಿಹಾಸದಲ್ಲಿ ಈ ಚಿತ್ರವೂ ಒಂದು ಮೈಲುಗಲ್ಲಾಗಿತ್ತು. ಅಮಿತಾಭ್ ಬಚ್ಚನ್, ವಿನೋದ್ ಖನ್ನಾ ಮತ್ತು ರಿಶಿ ಕಪೂರ್ಗೂ ಈ ಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಬಾಕ್ಸ್ ಆಫೀಸ್ನಲ್ಲೂ ಈ ಚಿತ್ರ ಸಖತ್ ಸೌಂಡ್ ಮಾಡಿತ್ತು.

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!