Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ಯುಎಇ ಎಕ್ಸ್ ಚೇಂಜ್‍ನಲ್ಲಿ ಗ್ರಾಹಕರ ಸಮಾಗಮ…

ಯುಎಇ ಎಕ್ಸ್ ಚೇಂಜ್‍ನಲ್ಲಿ ಗ್ರಾಹಕರ ಸಮಾಗಮ…

ಮಂಗಳೂರು : ಸಾರ್ವಜನಿಕ ಸೇವೆಯಲ್ಲಿ ಒಳ್ಳೆಯ ಹೆಸರು ಗಳಿಸಿರುವ ಯುಇಎ  ಎಕ್ಸ್ ಚೇಂಜ್‍ನ ಕಂಕನಾಡಿ ಬ್ರ್ಯಾಂಚ್‍ನಲ್ಲಿ ವಾರ್ಷಿಕ ಗ್ರಾಹಕರ ಸಮಾವೇಶ ನಡೆಯಿತು. ಸಂಸ್ಥೆಯ ಗ್ರಾಹಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಗ್ರಾಹಕರು ಮತ್ತು ಸಂಸ್ಥೆ ನಡುವಣ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿತ್ತು.

ಯುಇಎ  ಎಕ್ಸ್ ಚೇಂಜ್ ನ ಝೋನಲ್ ಹೆಡ್ ಶರತ್ ಶೆಟ್ಟಿ ಮತ್ತು ಬ್ರ್ಯಾಂಚ್‍ನ ಮುಖ್ಯಸ್ಥ ಉದಯ್ ಶೆಟ್ಟಿ ಗ್ರಾಹಕರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಳಿಕ ಸೇವಾ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಗ್ರಾಹಕರಿಂದಲೂ ಅಭಿಪ್ರಾಯ ಸಂಗ್ರಹಿಸಲಾಯ್ತು. ಜೊತೆಗೆ, ಸಂಸ್ಥೆಯಲ್ಲಿ ಲಭ್ಯವಿರುವ ಸೇವೆಗಳ ಮಾಹಿತಿಯನ್ನೂ ಗ್ರಾಹಕರಿಗೆ ನೀಡಲಾಯ್ತು. ಕೆಲ ಗ್ರಾಹಕರು ಕೂಡಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಲ್ಲದೆ, ಸಂಸ್ಥೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!