Friday , September 21 2018
ಕೇಳ್ರಪ್ಪೋ ಕೇಳಿ
Home / Film News / ಸ್ಯಾನಿಟರಿ ಪ್ಯಾಡ್ ಕೈಯಲ್ಲಿ ಹಿಡಿದು ಅಮೀರ್ ಪೋಸ್ : ಶಾರೂಖ್, ಸಲ್ಮಾನ್, ಬಚ್ಚನ್​ಗೆ ಚಾಲೆಂಜ್…!

ಸ್ಯಾನಿಟರಿ ಪ್ಯಾಡ್ ಕೈಯಲ್ಲಿ ಹಿಡಿದು ಅಮೀರ್ ಪೋಸ್ : ಶಾರೂಖ್, ಸಲ್ಮಾನ್, ಬಚ್ಚನ್​ಗೆ ಚಾಲೆಂಜ್…!

ಮುಂಬೈ : ಬಾಲಿವುಡ್ ಸೂಪರ್​ಸ್ಟಾರ್ ಅಮೀರ್ ಖಾನ್ ‘ಪ್ಯಾಡ್​ಮ್ಯಾನ್’ ಚಾಲೆಂಜ್​ ಅನ್ನು ಸ್ವೀಕರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಯಾನಿಟರಿ ಪ್ಯಾಡ್ ಹಿಡ್ಕೊಂಡು ಫೋಟೋಗೆ ಪೋಸ್ ಕೊಟ್ಟಿರುವ ಅಮೀರ್, ಈ ಚಾಲೆಂಜ್ ನೀಡಿದ್ದ ಟ್ವಿಂಕಲ್ ಖನ್ನಾ ಅವರಿಗೂ ಅಮೀರ್ ಧನ್ಯವಾದ ಹೇಳಿದ್ದು, ನನ್ನ ಕೈಯಲ್ಲಿ ಪ್ಯಾಡ್ ಇದೆ. ಇದರಲ್ಲಿ ನಾಚಿಕೆ ಪಡುವ ವಿಷಯ ಏನಿಲ್ಲ. ಇದು ಸ್ವಾಭಾವಿಕ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಇದರ ಮುಂದುವರಿದ ಭಾಗವಾಗಿ ಮುಂದೆ ಇದೇ ರೀತಿ ಶಾರೂಖ್ ಖಾನ್, ಸಲ್ಮಾನ್ ಖಾನ್ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಈ ಚಾಲೆಂಜ್ ಸ್ವೀಕರಿಸಬೇಕು ಎಂದು ಅಮೀರ್ ಹೇಳಿದ್ದಾರೆ.


ಪ್ಯಾಡ್​ಮ್ಯಾನ್ ಚಿತ್ರ ರಿಲೀಸ್ ಆಗುವ ತನಕ ಈ ಚಾಲೆಂಜ್​ಗಳು ಒಬ್ಬರಿಂದ ಒಬ್ಬರಿಗೆ ಹೀಗೆಯೇ ಮುಂದುವರಿಯಲಿದೆ. ಅಕ್ಷಯ್ ಕುಮಾರ್ ಅಭಿನಯದ ಈ ಸಿನೆಮಾ ಋತುಚಕ್ರದ ಬಗ್ಗೆಯೇ ಇದೆ. ಆರ್​. ಬಾಲ್ಕಿ ಈ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದು, ಅಕ್ಷಯ್ ಜೊತೆ ರಾಧಿಕಾ ಆಪ್ಟೆ, ಸೋನಂ ಕಪೂರ್ ಕೂಡಾ ಅಭಿನಯಿಸಿದ್ದಾರೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!