Sunday , February 17 2019
ಕೇಳ್ರಪ್ಪೋ ಕೇಳಿ
Home / Film News / ತನ್ನದೇ ಸಿನೆಮಾ ನೋಡಲು ಕನ್ನಡತಿಯ ಈ ಗೆಟಪ್… : ಇದು ಯಾರು ಅಂತ ಗುರುತಿಸ್ತೀರಾ…?

ತನ್ನದೇ ಸಿನೆಮಾ ನೋಡಲು ಕನ್ನಡತಿಯ ಈ ಗೆಟಪ್… : ಇದು ಯಾರು ಅಂತ ಗುರುತಿಸ್ತೀರಾ…?

ಬೆಂಗಳೂರು : ಸೆಲೆಬ್ರಿಟಿಗಳೆಂದರೆ ಬೇಕಾದಲ್ಲಿ ಹೋಗೋದು ಕಷ್ಟ. ಎಲ್ಲಿ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ತಮ್ಮದೇ ಸಿನೆಮಾಕ್ಕೆ ಥಿಯೇಟರ್‍ನಲ್ಲಿ ರೆಸ್ಪಾನ್ಸ್ ಹೇಗಿದೆ ನೋಡೋಣ ಎಂದರೂ ಇದೇ ಸಮಸ್ಯೆ ಕೆಲವೊಮ್ಮೆ ಕಾಡುತ್ತದೆ. ಹೀಗಾಗಿ, ಸ್ಯಾಂಡಲ್‍ವುಡ್‍ನ ಈ ನಟಿ ಹೊಸದೊಂದು ಐಡಿಯಾ ಮಾಡಿದ್ದಾರೆ. ಅದು ವೇಷ ಮರೆಸಿಕೊಂಡು ಥಿಯೇಟರ್‍ಗೆ ಹೋಗೋದು…! ಇಂತಹದ್ದೊಂದು ಐಡಿಯಾ ಮಾಡಿದವರು ಬೇರೆ ಯಾರೂ ಅಲ್ಲ. ಸುಂದರ ನಟಿ ಹರಿಪ್ರಿಯಾ…

ಹರಿಪ್ರಿಯಾ ನಟನೆಯ ತೆಲುಗು ಚಿತ್ರ ಜೈ ಸಿಂಹ ಇತ್ತೀಚಿಗೆ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡಾ ಸಿಕ್ಕಿದೆ. ಬೆಂಗಳೂರಿನಲ್ಲೂ ಈ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಥಿಯೇಟರ್ ಅಟ್ಮಾಸ್ಪಿಯರ್‍ನಲ್ಲಿ ಸಿನೆಮಾ ನೋಡೋಣ ಅಂತ ಹರಿಪ್ರಿಯಾ ಮಾರುವೇಷದಲ್ಲಿ ಹೋಗಿದ್ದಾರೆ. ಇದನ್ನು ಹರಿಪ್ರಿಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!