Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಪ್ಯಾಡ್‍ಮ್ಯಾನ್ ಚಾಲೆಂಜ್ : ಸ್ಯಾನಿಟರಿ ಪ್ಯಾಡ್‍ನೊಂದಿಗೆ ಅಮೀರ್, ಟ್ವಿಂಕಲ್, ಅಲಿಯಾ ಭಟ್, ಅಕ್ಷಯ್ ಕುಮಾರ್ ಪೋಸ್

ಪ್ಯಾಡ್‍ಮ್ಯಾನ್ ಚಾಲೆಂಜ್ : ಸ್ಯಾನಿಟರಿ ಪ್ಯಾಡ್‍ನೊಂದಿಗೆ ಅಮೀರ್, ಟ್ವಿಂಕಲ್, ಅಲಿಯಾ ಭಟ್, ಅಕ್ಷಯ್ ಕುಮಾರ್ ಪೋಸ್

ಮುಂಬೈ : ಬಾಲಿವುಡ್‍ನಲ್ಲಿ ಈಗ ಹೊಸದೊಂದು ಚಾಲೆಂಜ್ ಆರಂಭವಾಗಿದೆ. ಅದು ಪ್ಯಾಡ್‍ಮ್ಯಾನ್ ಚಾಲೆಂಜ್. ಪ್ಯಾಡ್‍ಮ್ಯಾನ್ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಈ ಚಿತ್ರದ ಸಲುವಾಗಿ ಹಲವರು ನಾಯಕ, ನಾಯಕಿಯರು ಪ್ರಚಾರ ಕೈಗೊಂಡಿದ್ದಾರೆ. ಇದು ಋತುಮತಿ ಮಹಿಳೆಯರ ಸಮಸ್ಯೆಯ ಬಗ್ಗೆ ಸುತ್ತುವ ಕತೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರ ಕಂಡು ಹಿಡಿದು ಗ್ರಾಮವೊಂದರಲ್ಲಿ ಜಾಗೃತಿ ಮೂಡಿಸಿದ್ದ ಅರುಣಾಚಲಂ ಮುರುಘನಾಥಮ್ ಅವರ ಕತೆಯೇ ಈ ಚಿತ್ರಕ್ಕೆ ಸ್ಫೂರ್ತಿ…


ಹೀಗಾಗಿ, ಈ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದು ಶುರುವಾಗಿದೆ. ಅದು, ಸ್ಯಾನಿಟರಿ ಪ್ಯಾಡ್ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕುವುದು…


ಪ್ಯಾಡ್‍ಮ್ಯಾನ್ ಚಿತ್ರದ ನಿರ್ಮಾಪಕಿ ಟ್ವಿಂಕಲ್ ಖನ್ನಾ ಮೊದಲು ತನ್ನ ಸ್ನೇಹಿತ ಅಮೀರ್ ಖಾನ್ ಅವರಿಗೆ ಈ ಚಾಲೆಂಜ್ ಮಾಡಿದರು. ಅಮೀರ್ ತಕ್ಷಣ ಇದಕ್ಕೆ ಸ್ಪಂದಿಸಿದ ಪ್ಯಾಡ್‍ನೊಂದಿಗೆ ಫೋಟೋ ತೆಗೆದು ಟ್ವಿಟರ್‍ಗೆ ಹಾಕಿದ್ದರು. ಜೊತೆಗೆ, ಶಾರೂಖ್, ಸಲ್ಮಾನ್, ಅಮಿತಾಭ್ ಅವರು ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಇದೇ ರೀತಿ ಹಲವರು ಸ್ಯಾನಿಟರಿ ಪ್ಯಾಡ್ ಜೊತೆ ಪೋಸ್ ಕೊಟ್ಟಿದ್ದಾರೆ. ಅಕ್ಷಯ್ ಕುಮಾರ್, ಶಬಾನಾ ಆಜ್ಮಿ, ಅಲಿಯಾ ಭಟ್, ರಾಧಿಕಾ ಆಪ್ಟೆ ಹೀಗೆ ಸ್ಯಾನಿಟರಿ ಪ್ಯಾಡ್ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿಕೊಂಡಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!