ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಈಗ `ಪದ್ಮಾವತ್’ ಚಿತ್ರದ ಸಕ್ಸಸ್ನಲ್ಲಿ ಬೀಗುತ್ತಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ರಣವೀರ್ ತನ್ನ ಲವ್ ಲೈಫ್ ಬಗ್ಗೆಯೂ ಬಿಚ್ಚಿಟ್ಟಿದ್ದಾರೆ. ಹುಡುಗಿಯರ ಸುತ್ತಾ ಸದಾ ಫೇಮಸ್ ಆಗಿರುವ ನನಗೆ 14 ವರ್ಷದಲ್ಲೇ ಮೂವರು ಗರ್ಲ್ಫ್ರೆಂಡ್ಸ್ ಇದ್ದರು ಎಂದು ಹೇಳಿ ರಣವೀರ್ ಈ ಸಂದರ್ಶನದಲ್ಲಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದರು. ಹಾಗಂತ, ಈಗಲೂ ರಣವೀರ್ ಇಂತಹ ಸುದ್ದಿಯಿಂದ ಹಿಂದೆ ಬಿದ್ದವರಲ್ಲ…! ಸದ್ಯ ರಣವೀರ್ ಜೊತೆ ಕೇಳಿ ಬರುತ್ತಿರುವ ಹೆಸರು ದೀಪಿಕಾ ಪಡುಕೋಣೆಯವರದ್ದು… ಈ ಜೋಡಿ ಇನ್ನೇನು ಮದ್ವೆಯ ಸಿದ್ಧತೆಯಲ್ಲಿದೆ ಎಂಬ ಮಟ್ಟಿಗೆ ಇವರ ಲವ್ ಕಹಾನಿ ಜೋರಾಗಿಯೇ ಸುದ್ದಿಯಲ್ಲಿದೆ.. ಆದ್ರೆ, ರಣವೀರ್ ಲೈಫ್ನಲ್ಲಿ ದೀಪಿಕಾ ಬರುವುದಕ್ಕೂ ಮೊದ್ಲು ಇವರೊಂದಿಗೆ ಇನ್ನೊಂದಷ್ಟು ನಾಯಕಿಯರ ಹೆಸರು ತಗ್ಲಾಕೊಂಡಿತ್ತು…!
ಕಾಲೇಜು ದಿನಗಳಲ್ಲಿ ರಣವೀರ್ ಧರ್ಮೇಂದ್ರ ಮತ್ತು ಹೇಮಾಮಾಲಿನಿ ಪುತ್ರಿ ಅಹನಾ ಡಿಯೋಲ್ ಜೊತೆ ಡೇಟಿಂಗ್ ಮಾಡ್ತಿದ್ದರಂತೆ…! ಬಳಿಕ ಈ ಜೋಡಿ ದೂರವಾಗಿದ್ದು, ಅಹನಾ ಕೂಡಾ ದಿಲ್ಲಿಯ ಉದ್ಯಮಿಯೊಬ್ಬರನ್ನು ಮದುವೆಯಾಗಿ ಸುಖವಾಗಿದ್ದಾರೆ.
ಇನ್ನು, ರಣವೀರ್ ಜೊತೆ ಕೇಳಿ ಬಂದಿದ್ದ ಮತ್ತೊಂದು ಹೆಸರು ನಟಿ ಅನುಷ್ಕಾ ಶರ್ಮಾರದ್ದು. ಸದ್ಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ವರಿಸಿರುವ ಅನುಷ್ಕಾ ಹೆಸರು ಈ ಹಿಂದೆ ರಣವೀರ್ ಜೊತೆಯೂ ಥಳುಕು ಹಾಕಿಕೊಂಡಿತ್ತು. ಸಿನೆಮಾವೊಂದರ ಶೂಟಿಂಗ್ನಲ್ಲಿ ಇವರಿಬ್ಬರ ಲವ್ ಶುರುವಾಯ್ತಾದರೂ ಬಹುಬೇಗನೇ ಅದು ಕೊನೆಯಾಗಿತ್ತು… ಆದ್ರೆ. ಪ್ರೇಮಿಗಳಾಗಿ ಅಲ್ಲದಿದ್ದರೂ ಇವರಿಬ್ಬರು ಸ್ನೇಹಿತರಾಗಿ ಮುಂದುವರಿದಿದ್ದರು.
ಸೋನಾಕ್ಷಿ ಸಿನ್ಹಾ ಹೆಸರು ಕೂಡಾ ರಣವೀರ್ ಜೊತೆ ಕೇಳಿ ಬಂದಿತ್ತು. ಆದರೆ, ರಣವೀರ್ ಈ ಸುದ್ದಿಯನ್ನು ಅಲ್ಲಗಳೆದಿದ್ದರು. ನಾವಿಬ್ಬರು ಬರೀ ಫ್ರೆಂಡ್ಸ್ ಎಂದು ಸ್ಪಷ್ಟಪಡಿಸಿದ್ದರು…