Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / ವಿದೇಶಕ್ಕೆ ರಾಜು ಕನ್ನಡ ಮೀಡಿಯಂ : ಚಿತ್ರಕ್ಕೆ ಸ್ಟಾರ್ ನಾಯಕರಿಂದಲೂ ಮೆಚ್ಚುಗೆ

ವಿದೇಶಕ್ಕೆ ರಾಜು ಕನ್ನಡ ಮೀಡಿಯಂ : ಚಿತ್ರಕ್ಕೆ ಸ್ಟಾರ್ ನಾಯಕರಿಂದಲೂ ಮೆಚ್ಚುಗೆ

ಬೆಂಗಳೂರು : ಗುರುನಂದನ್ ಅಭಿನಯದ `ರಾಜು ಕನ್ನಡ ಮೀಡಿಯಂ’ ಚಿತ್ರ ಯಶಸ್ಸಿನ ನಾಗಾಲೋಟದಲ್ಲಿ ಸಾಗುತ್ತಿದೆ. ನರೇಶ್ ಕುಮಾರ್ ನಿರ್ದೇಶನದ, ಕೆ.ಎ ಸುರೇಶ್ ನಿರ್ಮಾಣದ ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಕಿಚ್ಚ ಸುದೀಪ್ ಅವರು ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವಿದೇಶದಲ್ಲಿ ಹವಾ ಕ್ರಿಯೇಟ್ ಮಾಡಲು ರಾಜು ಹೊರಟಿದೆ. ಇದೇ ವಾರ ಅಮೇರಿಕಾ, ಸಿಂಗಾಪುರ, ಕೆನಡಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಸ್ಟಾರ್ ನಟ, ನಟಿಯರು ಕೂಡಾ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಶುಭಹಾರೈಸಿದ್ದಾರೆ. ಕಿಚ್ಚ ಸುದೀಪ್ ಅವರಂತೂ ಈ ಚಿತ್ರವನ್ನು ಬಹುವಾಗಿ ಕೊಂಡಾಡಿದ್ದಾರೆ. ಇನ್ನು, ಮತ್ತೋರ್ವ ನಟ ಪವರ್‍ಸ್ಟಾರ್ ಪುನೀತ್ ಕೂಡಾ ರಾಜು ಕನ್ನಡ ಮೀಡಿಯಂ ಅನ್ನು ಕೊಂಡಾಡಿದ್ದಾರೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!