Thursday , June 21 2018
ಕೇಳ್ರಪ್ಪೋ ಕೇಳಿ
Home / Film News / `ಮೇಡಂ ಪ್ಲೀಸ್ ಸಹಾಯ ಮಾಡಿ…’: ಸಚಿವೆ ಸುಷ್ಮಾ ಸ್ವರಾಜ್‍ಗೆ ಮಲ್ಲಿಕಾ ಶರಾವತ್ ಮನವಿ

`ಮೇಡಂ ಪ್ಲೀಸ್ ಸಹಾಯ ಮಾಡಿ…’: ಸಚಿವೆ ಸುಷ್ಮಾ ಸ್ವರಾಜ್‍ಗೆ ಮಲ್ಲಿಕಾ ಶರಾವತ್ ಮನವಿ

ಮುಂಬೈ : ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಈಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಡಚ್‍ನ ಫ್ರಿ ಎ ಗರ್ಲ್ ಎಂಬ ಎನ್‍ಜಿಓ ಸಹ ಸಂಸ್ಥಾಪಕಿಗೆ ಭಾರತೀಯ ವೀಸಾ ಕಲ್ಪಿಸುವಂತೆ ಮಲ್ಲಿಕಾ ಕೇಳಿಕೊಂಡಿದ್ದಾರೆ.


ಎನ್‍ಜಿಓ ಸಹ ಸಂಸ್ಥಾಪಕಿ ಎವಿಲೀನ್ ಹೊಲ್ಸಕೀನ್ ಹೆಣ್ಮಕ್ಕಳ ರಕ್ಷಣೆ, ಮಾನವ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆ ವಿರುದ್ಧ ಹೋರಾಟ ಹಾಗೂ ಜಾಗೃತಿ ಮಾಡುತ್ತಿದ್ದಾರೆ. ಆದರೆ, ಇವರಿಗೆ ಭಾರತೀಯ ವೀಸಾ ಪಡೆಯಲು ಸಾಧ್ಯವಾಗುತ್ತಿಲ್ಲ. ಪದೇ ಪದೇ ವೀಸಾ ಮನವಿ ತಿರಸ್ಕøತವಾಗುತ್ತಿದೆ. ಹೀಗಾಗಿ, ಇವರಿಗೆ ವೀಸಾ ನೀಡಲು ಸಹಾಯ ಮಾಡುವಂತೆ ಮಲ್ಲಿಕಾ ಟ್ವಿಟರ್‍ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಎನ್‍ಜಿಓ ಫ್ರಿ ಎ ಗರ್ಲ್ ನ ರಾಯಭಾರಿ ಆಗಿರುವ ಮಲ್ಲಿಕಾ ಈ ಸಂಸ್ಥೆಯಲ್ಲಿ ಒಂದಷ್ಟು ಕೆಲಸ ಮಾಡುತ್ತಿದ್ದಾರೆ.

About sudina

Check Also

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ

ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯ ನೇಮಕವಾಗಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. …

Leave a Reply

Your email address will not be published. Required fields are marked *

error: Content is protected !!