Monday , August 20 2018
ಕೇಳ್ರಪ್ಪೋ ಕೇಳಿ
Home / Film News / ಪ್ರಿಯಾರನ್ನು ಮಾತ್ರವಲ್ಲ ಪಾಪ ಈ ಪ್ರತಿಭಾವಂತನನ್ನೂ ನೋಡಿ…!

ಪ್ರಿಯಾರನ್ನು ಮಾತ್ರವಲ್ಲ ಪಾಪ ಈ ಪ್ರತಿಭಾವಂತನನ್ನೂ ನೋಡಿ…!

ತಿರುವನಂತಪುರಂ : ಮಲಯಾಳಂನ `ಒರು ಆಧಾರ್ ಲವ್’ ಚಿತ್ರದ ಮೂಲಕ ರಾತ್ರೋರಾತ್ರಿ ಹಿಟ್ ಆದವರು ಪ್ರಿಯಾ ಪ್ರಕಾಶ್ ವಾರಿಯರ್. ಕ್ಯೂಟ್ ಎಕ್ಸ್‍ಪ್ರೆಷನ್, ಹುಬ್ಬೇರಿಸುವ ಕಣ್ಣಲ್ಲೇ ಏರಿಸೋ ಮಾದಕತೆ ಎಲ್ಲರನ್ನೂ ಸೆಳೆದಿತ್ತು. ಹೀಗಾಗಿ, ಈಗ ಎಲ್ಲಿ ನೋಡಿದರೂ ಪ್ರಿಯಾರದ್ದೇ ಮಾತು.

ಆದರೆ, ವೈರಲ್ ಆದ ವೀಡಿಯೋದಲ್ಲಿ ಪ್ರಿಯಾರನ್ನು ಹುಬ್ಬೇರಿಸುವಂತೆ ಮಾಡಿ ಮನೋಜ್ಞ ಅಭಿನಯ ನೀಡಿದ್ದ ಹುಡುಗನ ಬಗ್ಗೆ ಯಾರೂ ಅಷ್ಟಾಗಿ ಮಾತನಾಡುತ್ತಿಲ್ಲ… ಅಂತಹ ಪ್ರತಿಭಾವಂತನನ್ನು ನಾವು ನಿಮಗೆ ಪರಿಚಯಿಸ್ತೀವಿ ನೋಡಿ…
ಈ ಹುಡುಗನ ಹೆಸರು ರೋಷನ್ ಅಬ್ದುಲ್ ರಹೋಫ್. ವಯಸ್ಸಿನ್ನೂ 19. ಐಸಿಎ ಫಸ್ಟ್ ಇಯರ್ ವಿದ್ಯಾರ್ಥಿ ರೋಷನ್. `ಒರ್ ಆಧಾರ್ ಲವ್’ ಮೂಲಕವೇ ಈ ಹುಡುಗ ಕೂಡಾ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ರೋಷನ್ ಒಳ್ಳೆಯ ಡ್ಯಾನ್ಸ್ ಕೂಡಾ ಹೌದು. `ಡಿ4′ ಎಂಬ ರಿಯಾಲಿಟಿ ಶೋನಲ್ಲಿ ಪಾಳ್ಗೊಂಡಿದ್ದ ಫೈನಲಿಸ್ಟ್‍ಗಳಲ್ಲಿ ರೋಷನ್ ಕೂಡಾ ಒಬ್ಬರು.

About sudina

Check Also

ಕೊನೆಗೂ ಈಡೇರಿತು ತ್ರಿಶಾ ಕಂಡಿದ್ದ ಬಹು ದಿನಗಳ ಕನಸು…

ಚೆನ್ನೈ : ಖ್ಯಾತ ನಟಿ ತ್ರಿಶಾ ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ಆಸೆಯೊಂದು ಕೊನೆಗೂ ಕೈಗೂಡಿದೆ… ದಕ್ಷಿಣ ಭಾರತ ಬಹುತೇಕ …

Leave a Reply

Your email address will not be published. Required fields are marked *

error: Content is protected !!