Sunday , December 16 2018
ಕೇಳ್ರಪ್ಪೋ ಕೇಳಿ
Home / Film News / ಬಾಲಿವುಡ್‍ಗೆ ಹಾರುತ್ತಿದ್ದಾರೆ ಶೃದ್ಧಾ ಶ್ರೀನಾಥ್…

ಬಾಲಿವುಡ್‍ಗೆ ಹಾರುತ್ತಿದ್ದಾರೆ ಶೃದ್ಧಾ ಶ್ರೀನಾಥ್…

ಬೆಂಗಳೂರು : ಯು ಟರ್ನ್ ಮೂಲಕ ಬೆಳಕಿಗೆ ಬಂದಿದ್ದ ಶೃದ್ಧಾ ಶ್ರೀನಾಥ್ ಈಗ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ನಟರೊಂದಿಗೆಲ್ಲಾ ಶೃದ್ಧಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ತೆಲುಗು, ತಮಿಳಿನಲ್ಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿರುವ ಶೃದ್ಧಾ ಬಾಲಿವುಡ್‍ಗೆ ಹಾರಲು ಸಿದ್ಧರಾಗಿದ್ದಾರೆ. ತಮಿಳಿನಲ್ಲಿ ಮಾಧವನ್ ಜೊತೆಗಿನ ವಿಕ್ರಮ್ ವೇದಾ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶೃದ್ಧಾಗೆ ಈಗ ಬಾಲಿವುಡ್ ಭಾಗ್ಯದ ಬಾಗಿಲು ತೆರೆದಿದೆ. ಟಿಗ್ಮಾನ್ಶು ದುಲಿಯಾ ಅವರ `ಮಿಲನ್ ಟಾಕೀಸ್’ ಚಿತ್ರಕ್ಕೆ ಶೃದ್ಧಾ ನಾಯಕಿಯಾಗಲಿದ್ದಾರೆ. ಈ ಚಿತ್ರದಲ್ಲಿ ಅಲಿ ಫೈಜಲ್ ನಾಯಕನಾಗಿ ಅಭಿನಯಿಸಲಿದ್ದಾರೆ. ಈ ಅವಕಾಶಕ್ಕೆ ಶೃದ್ಧಾ ಖುಷಿ ವ್ಯಕ್ತಪಡಿಸಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!