Saturday , January 19 2019
ಕೇಳ್ರಪ್ಪೋ ಕೇಳಿ
Home / Film News / ವೈರಲ್ ಆಗುತ್ತಿದೆ `ಅಪ್ಪೆ ಟೀಚರ್’ 360 ಡಿಗ್ರಿ ಪೋಸ್ಟರ್

ವೈರಲ್ ಆಗುತ್ತಿದೆ `ಅಪ್ಪೆ ಟೀಚರ್’ 360 ಡಿಗ್ರಿ ಪೋಸ್ಟರ್

ಮಂಗಳೂರು : ಕೋಸ್ಟಲ್‍ವುಡ್ ಈಗ ತುಂಬಾ ಆಕ್ಟೀವ್ ಆಗಿದೆ. ತುಳು ಚಿತ್ರರಂಗದಲ್ಲೂ ಸಾಲು ಸಾಲು ಚಿತ್ರಗಳು ಬರುತ್ತಿವೆ. ಸದ್ಯ ಕೋಸ್ಟಲ್‍ವುಡ್‍ನಲ್ಲಿ `ಅಪ್ಪೆ ಟೀಚರ್’ ಎಂಬ ಚಿತ್ರವೂ ಸೌಂಡ್ ಮಾಡುತ್ತಿದೆ. ಈಗಾಗಲೇ ಟೈಟಲ್ ಮೂಲಕವೇ ಗಮನ ಸೆಳೆದಿರುವ `ಅಪ್ಪೆ ಟೀಚರ್’ ಚಿತ್ರ ಈಗ ತನ್ನ 360 ಡಿಗ್ರಿ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ಸದ್ದು ಮಾಡುತ್ತಿದೆ.

ಕಿಶೋರ್ ಮೂಡಬಿದಿರೆ ನಿರ್ದೇಶನದ ಈ ಚಿತ್ರ ಇತ್ತೀಚೆಗಷ್ಟೇ 360 ಡಿಗ್ರಿ ಪೋಸ್ಟರ್ ರಿಲೀಸ್ ಮಾಡುತ್ತಿತ್ತು. ಕೋಸ್ಟಲ್‍ವುಡ್ ಮಟ್ಟಿಗೆ ಇದೊಂದು ಹೊಸ ಪ್ರಯತ್ನ. ಸ್ಯಾಂಡಲ್‍ವುಡ್‍ನಲ್ಲಿ ಶಿವಣ್ಣ ಅಭಿನಯದ ಟಗರು ಚಿತ್ರದ 360 ಡಿಗ್ರಿ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ `ಅಪ್ಪೆ ಟೀಚರ್’ ತಂಡವೂ ಇಂತಹದ್ದೇ ಪ್ರಯತ್ನ ಮಾಡಿದ್ದು, ಒಂದೇ ಪೋಸ್ಟರ್‍ನಲ್ಲಿ 14 ಕಲಾವಿದರನ್ನು ತೋರಿಸಲಾಗಿದೆ. ಈ ಮೂಲಕ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಚಿತ್ರತಂಡ ಮುಂದಡಿ ಇಟ್ಟಿದೆ. ಚಿತ್ರದ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದ್ದು, ಶೀಘ್ರದಲ್ಲೇ ಅಪ್ಪೆ ಟೀಚರ್ ಚಿತ್ರ ರಿಲೀಸ್ ಆಗುವ ಸಾಧ್ಯತೆಯೂ ಇದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!