Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗಿಂದು ಹುಟ್ಟುಹಬ್ಬದ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗಿಂದು ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಖುಷಿಯಲ್ಲಿ ಇದ್ದಾರೆ. ದರ್ಶನ್ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ದಿನಕ್ಕಾಗಿ ದರ್ಶನ್ ಅಭಿಮಾನಿಗಳು ಕಾತರಿಸುತ್ತಿದ್ದರು. ದರ್ಶನ್ ಹುಟ್ಟುಹಬ್ಬದಾಚರಣೆಯ ಸಂಭ್ರಮ ಒಂದು ತಿಂಗಳ ಮುಂಚೆಯೇ ಆರಂಭವಾಗಿತ್ತು. ಇದೀಗ, ಮಧ್ಯರಾತ್ರಿಯೇ ಅಭಿಮಾನಿಗಳು ಕೇಕ್ ಕತ್ತರಿಸಿ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದ್ಭುತ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾದರೂ ತಂದೆಯ ಖ್ಯಾತಿಯ ಲಾಭದಿಂದ ಮೇಲೆ ಬರದೆ ಸ್ವಂತ ಶ್ರಮ ಮತ್ತು ಛಲದಿಂದ ಚಿತ್ರರಂಗದಲ್ಲೊಂದು ಸ್ಥಾನ ಪಡೆದು ಬಾಕ್ಸ್‍ಆಫೀಸ್ ಸುಲ್ತಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ದರ್ಶನ್. ಅಪಾರ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ದರ್ಶನ್ ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ, ದರ್ಶನ್ 51ನೇ ಸಿನೆಮಾ `ಯಜಮಾನ’ದ ತಯಾರಿ ಕೂಡಾ ಭರ್ಜರಿಯಾಗಿಯೇ ನಡೆಯುತ್ತಿದೆ. ಇವೆಲ್ಲವೂ ದರ್ಶನ್ ಅಭಿಮಾನಿಗಳನ್ನು ಇನ್ನಷ್ಟು ಸಂಭ್ರಮದಲ್ಲಿ ಮುಳುಗುವಂತೆ ಮಾಡಿದೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!