Monday , February 18 2019
ಕೇಳ್ರಪ್ಪೋ ಕೇಳಿ
Home / Film News / ಹುಬ್ಬೇರಿಸಿದ್ದ ಚೆಲುವೆಗೆ ಸಾಲುಸಾಲು ವಾಲೆಂಟೈನ್ ಡೇ ರಿಕ್ವೆಸ್ಟ್…!

ಹುಬ್ಬೇರಿಸಿದ್ದ ಚೆಲುವೆಗೆ ಸಾಲುಸಾಲು ವಾಲೆಂಟೈನ್ ಡೇ ರಿಕ್ವೆಸ್ಟ್…!

ತಿರುವನಂತಪುರಂ: ಹುಬ್ಬೇರಿಸಿ ಹುಡುಗರ ಹೃದಯಕ್ಕೆ ಹೂಬಾಣ ಬಿಟ್ಟಿದ್ದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಇಂಟರ್ನೆಟ್ ಕ್ವೀನ್ ಆಗಿದ್ದಾಳೆ. ಗೂಗಲ್ ಸರ್ಚ್ ನಲ್ಲೂ ಈಕೆಯೇ ರಾಣಿ. ಅದಕ್ಕೆ ಸರಿಯಾಗಿ ಮೊನ್ನೆ ಪ್ರೇಮಿಗಳ ದಿನದಂದು ಪ್ರಿಯಾಗೆ ಸಾಲು ಸಾಲು ವ್ಯಾಲೆಂಟೈನ್ ಡೇ ರಿಕ್ವೆಸ್ಟ್ ಗಳು ಬಂದಿವೆಯಂತೆ. ಇವೆಲ್ಲವನ್ನು ಪ್ರಿಯಾ ತುಂಬಾ ಜಾಣ್ಮೆಯಿಂದ ಸಂಭಾಳಿಸಿದ್ದಾರೆ. ಜೊತೆಗೆ, ನಾನು ಸದ್ಯಕ್ಕೆ ಸಿಂಗಲ್ ಆಗಿಯೇ ಇರುತ್ತೇನೆ ಎಂದು ಹೇಳಿಕೊಂಡಿದ್ದಾರೆ.


ಬಣ್ಣದ ಲೋಕದಲ್ಲಿ ಇನ್ನೂ ಹೆಷ್ಷಿನ ಸಾಧನೆ ಮಾಡಬೇಕೆಂದಿರುವ ಪ್ರಿಯಾಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎಂದರೆ ಬಲು ಇಷ್ಟ. ಜೊತೆಗೆ, ಶಾರೂಖ್ ಜೊತೆಗೂ ನಟಿಸುವ ಆಸೆ ಇದೆಯಂತೆ. ಅಲ್ಲದೆ, ಕ್ವೀನ್ ಆಗೋದಕ್ಕಿಂತ ಒಳ್ಳೆಯ ನಟಿಯಾಗುವುದೇ ನನ್ನ ಆಸೆ ಎಂಬುದು ಪ್ರಿಯಾ ಸ್ಪಷ್ಟ ನುಡಿ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!