Monday , February 18 2019
ಕೇಳ್ರಪ್ಪೋ ಕೇಳಿ
Home / Film News / ಅನುಷ್ಕಾ ಅವತಾರ ಕಂಡು ಪತಿ ವಿರಾಟ್ ಹೇಳಿದ್ದೇನು ಗೊತ್ತಾ…?

ಅನುಷ್ಕಾ ಅವತಾರ ಕಂಡು ಪತಿ ವಿರಾಟ್ ಹೇಳಿದ್ದೇನು ಗೊತ್ತಾ…?

ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿನಯದ ಹಾರರ್ ಚಿತ್ರ `ಪರಿ’ಯ ಟ್ರೇಲರ್ ರಿಲೀಸ್ ಆಗಿದೆ. ವಿವಾಹವಾದ ಬಳಿಕ ಅನುಷ್ಕಾ ಅಭಿನಯದ ರಿಲೀಸ್ ಆಗುತ್ತಿರುವ ಮೊದಲ ಚಿತ್ರ ಪರಿ. ಈ ಚಿತ್ರದಲ್ಲಿ ಅನುಷ್ಕಾ ಡಿಫ್ರೆಂಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ತನ್ನ ಲುಕ್‍ನಿಂದಲೇ ಅನುಷ್ಕಾ ಇಲ್ಲಿ ಸಂಚಲನ ಮೂಡಿಸಿದ್ದಾರೆ. ಈ ನಡುವೆ ಟ್ರೇಲರ್ ಕೂಡಾ ರಿಲೀಸ್ ಆಗಿದ್ದು ಒಳ್ಳೆಯ ರೆಸ್ಪಾನ್ಸ್ ಕೂಡಾ ಸಿಗುತ್ತಿದೆ.

ಈ ಟ್ರೇಲರ್ ಕಂಡು ಪತಿ ವಿರಾಟ್ ಕೂಡಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. `ನಾನು ಈ ಚಿತ್ರವನ್ನು ನೋಡಲು ಕಾತರಿಸುತ್ತಿದ್ದೇನೆ. ಈ ಹಿಂದೆ ಇಂತಹ ಅವತಾರದಲ್ಲಿ ನಾನು ಅನುಷ್ಕಾರನ್ನು ನೋಡಿಲ್ಲ’ ಎಂದು ವಿರಾಟ್ ಟ್ವಿಟ್ ಮಾಡಿದ್ದಾರೆ.


ಪ್ರೊಸಿಟ್ ರಾಯ್ ಈ ಚಿತ್ರದ ಡೈರೆಕ್ಟರ್. ಪರಂಬ್ರಟ ಚಟರ್ಜಿ, ರಜತ್ ಕಪೂರ್, ರಿತಿಬಾರಿ ಚಕ್ರವರ್ತಿ ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆ. ಮಾರ್ಚ್ 2 ರಂದು ಪರಿ ಚಿತ್ರ ತೆರೆ ಕಾಣಲಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!