Friday , April 20 2018
Home / Film News / ಅಕ್ಷಯ್ ಕುಮಾರ್ ಅಂದರೆ ಇದಕ್ಕೇ ಇಷ್ಟ ಆಗೋದು…

ಅಕ್ಷಯ್ ಕುಮಾರ್ ಅಂದರೆ ಇದಕ್ಕೇ ಇಷ್ಟ ಆಗೋದು…

ಮುಂಬೈ : ಬಾಲಿವುಡ್‍ನಲ್ಲಿ ಈಗ ಅಕ್ಷಯ್ ಕುಮಾರ್ ಗೆಲುವಿನ ಸರದಾರರಾಗಿದ್ದಾರೆ. ಸಾಮಾಜಿಕ ಕಳಕಳಿಯ ಚಿತ್ರದ ಮೂಲಕವೇ ಅಕ್ಷಯ್ ಗಮನ ಸೆಳೆಯುತ್ತಿದ್ದಾರೆ. ಈ ಹಿಂದೆ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಮೂಲಕ ಸ್ವಚ್ಛತೆಯ ಪಾಠ ಮಾಡಿದ್ದ ಅಕ್ಷಯ್ ಈಗ ಪ್ಯಾಡ್‍ಮ್ಯಾನ್ ಮೂಲಕ ಮಹಿಳಾ ಸಮಾನತೆ, ಸಮಸ್ಯೆ, ತುಡಿತ, ಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಚಿತ್ರ ಬಾಕ್ಸ್‍ಆಫೀಸ್‍ನಲ್ಲೂ ಸಖತ್ ಸೌಂಡ್ ಮಾಡುತ್ತಿದೆ.

ಅಕ್ಷಯ್ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ಯಂತ್ರ ಕಂಡು ಹಿಡಿದು ಗ್ರಾಮ್ಯ ಪ್ರದೇಶದಲ್ಲಿ ವ್ಯಾಪಕವಾದ ಬದಲಾವಣೆ ತಂದು ಗಮನ ಸೆಳೆದಿದ್ದ ಅರುಣಾಚಲಮ್ ಮುರುಘನಾಥಮ್ ಅವರ ಜೀವನಗಾಥೆಯೇ ಈ ಚಿತ್ರಕ್ಕೆ ಸ್ಫೂರ್ತಿ. ಇದೇ ಚಿತ್ರದಲ್ಲಿ ನಟಿಸಿ ಇನ್ನಷ್ಟು ಸ್ಫೂರ್ತಿ ಪಡೆದಿರುವ ಅಕ್ಷಯ್ ಕುಮಾರ್ ಈಗ ಮುಂಬೈ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಿಷನ್ ಅಳವಡಿಸಿದ್ದಾರೆ. ಜೊತೆಗೆ, ಇದೇ ರೀತಿ ದೇಶಾದ್ಯಂತ ಯಂತ್ರಗಳನ್ನು ಅಳವಡಿಸುವ ಆಶಯವನ್ನು ಅಕ್ಕಿ ವ್ಯಕ್ತಪಡಿಸಿದ್ದಾರೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!