Tuesday , May 22 2018
Home / Sudina Special / 83 ವರ್ಷದ ವರನಿಗೆ 30 ವರ್ಷದ ವಧು…! ಹೆಂಡ್ತಿ, ಮಗಳ ಎದುರೇ ವೃದ್ಧನ ಮದುವೆ…!

83 ವರ್ಷದ ವರನಿಗೆ 30 ವರ್ಷದ ವಧು…! ಹೆಂಡ್ತಿ, ಮಗಳ ಎದುರೇ ವೃದ್ಧನ ಮದುವೆ…!

ಜೈಪುರ : ಇದೊಂದು ವೃದ್ಧನ ಮದುವೆ. ಈ ವೃದ್ಧನ ವಯಸ್ಸು ಬರೋಬ್ಬರಿ 83. ಮೊಮ್ಮಕ್ಕನ್ನು ಆಡಿಸು ಮುದ್ದಿಸುವ ವಯಸ್ಸಿದು. ಈ ವಯಸ್ಸಿನಲ್ಲಿ ಈ ವ್ಯಕ್ತಿ ಮತ್ತೊಂದು ಮದುವೆಯಾಗಿದ್ದಾರೆ. 83 ವರ್ಷದ ಈ ನವ ವರನ ಹೆಸರು ಸುಕ್ರಾಂ ಬರುವಾ. ಈ ವೃದ್ಧನ ಕೈ ಹಿಡಿದಾಕೆ ರಮೇಶಿ. ವಯಸ್ಸು 30. ಅಂದರೆ, ಬರೋಬ್ಬರಿ 53 ವರ್ಷ ಕಿರಿಯವಳು…! ಇವರಿಬ್ಬರ ಮದುವೆ ರಾಜಸ್ಥಾನದ ಸಮೃದ್ಧಾ ಗ್ರಾಮದಲ್ಲಿ ನಡೆದಿದೆ. ಈ ವರ ಮೆರವಣಿಗೆ ಮೂಲಕ ಗ್ರಾಮಕ್ಕೆ ಬರುತ್ತಿದ್ದಂತೆಯೇ ಗ್ರಾಮದ ಮಹಿಳೆಯರೆಲ್ಲಾ ಆರತಿ ಬೆಳಗಿ ಹಾಡು ಹಾಡಿದ್ದಾರೆ. ಮಗಳು, ಆಕೆಯ ಪತಿ ಕೂಡಾ ಹಾಡು, ನೃತ್ಯದ ಮೂಲಕ ಇವರಿಗೆ ಜೊತೆಗಾಗಿದ್ದರು…! ಸಂಪ್ರದಾಯದಂತೆ ಸುಕ್ರಾಂ ಮತ್ತು ರಮೇಶಿ ಮದುವೆಯೂ ನಡೆದಿದೆ…

ಗಂಡು ಮಗುವಿಗಾಗಿ ಎರಡನೇ ಮದುವೆ…! : ಇಷ್ಟಕ್ಕೂ ಈ ಸುಕ್ರಾಂ ಎರಡನೇ ಮದುವೆಯಾಗ್ತಿರೋದು ಗಂಡು ಮಗುವಿಗಾಗಿ…! ಸುಕ್ರಾಂ ಮೊದಲ ಹೆಂಡ್ತಿಯಿಂದ ಈತನಿಗೆ ಒಬ್ಬ ಗಂಡು ಮಗ ಮತ್ತು ಮಗಳಾಗಿದೆ. ಇದ್ರಲ್ಲಿ ಮಗಳಿಗೆ ಮದುವೆಯಾಗಿ ಹಲವು ವರ್ಷಗಳಾಗಿವೆ. ಆದರೆ, 30ನೇ ವಯಸ್ಸಿನಲ್ಲಿ ಮಗ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದ. ಅಪಾರ ಆಸ್ತಿ ಹೊಂದಿರುವ ಸುಕ್ರಾಂಗೆ ತನ್ನ ಆಸ್ತಿಯನ್ನು ಮುಂದೆ ನೋಡಿಕೊಳ್ಳುವವರು ಯಾರು ಎಂಬ ಚಿಂತೆ. ಇದಕ್ಕಾಗಿಯೇ ಈ ಎರಡನೇ ಮದುವೆ. ಮೊದಲನೇ ಪತ್ನಿ ಕೂಡಾ ಗಂಡನ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆಸ್ತಿ ಅನಾಥವಾಗಬಾರದು, ನಮ್ಮ ಕುಟುಂಬಕ್ಕೂ ಒಂದು ಗಂಡು ದಿಕ್ಕು ಬೇಕು ಎಂಬ ಕಾರಣಕ್ಕೆ ನನ್ನ ಗಂಡ ಎರಡನೇ ಮದುವೆಯಾಗಿದ್ದಾರೆ ಎಂದು ಸುಕ್ರಾಂ ಪತ್ನಿ ಬಾತೂ ಬರುವಾ ಹೇಳಿದ್ದಾರೆ.

About sudina

Check Also

ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ನವದೆಹಲಿ : ಗಣಿತಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಸೊನ್ನೆಯನ್ನು ಕಂಡು ಹಿಡಿದದ್ದು ಭಾರತೀಯರು ಎಂಬ ಹೆಮ್ಮೆ ಎಲ್ಲರಿಗೂ ಇದೆ. ಈ …

Leave a Reply

Your email address will not be published. Required fields are marked *

error: Content is protected !!