Friday , April 20 2018
Home / Film News / ಅಮಿತಾಭ್‍ಗೆ 37 ವರ್ಷ ಹಿಂದಿನ ದಿನಗಳನ್ನು ನೆನಪಿಸಿತು ಒಂದು ಜಾಕೆಟ್…!

ಅಮಿತಾಭ್‍ಗೆ 37 ವರ್ಷ ಹಿಂದಿನ ದಿನಗಳನ್ನು ನೆನಪಿಸಿತು ಒಂದು ಜಾಕೆಟ್…!

ಮುಂಬೈ : ಅಮಿತಾಭ್ ಬಾಲಿವುಡ್‍ನ ಕಣ್ಮಣಿ. ಇಷ್ಟು ವಯಸ್ಸಾದರೂ ಉತ್ಸಾಹದ ಚಿಲುಮೆಯಂತೆ ಕೆಲಸ ಮಾಡುವ ಅಮಿತಾಭ್ ಜೀವನಪ್ರೀತಿ, ಚೈತನ್ಯ ಎಲ್ಲರಿಗೂ ಸ್ಫೂರ್ತಿ. ಅಮಿತಾಭ್ ಒಂದು ಜೀವಂತ ದಂತಕತೆ ಎಂಬುದರಲ್ಲಿ ಎಳ್ಳಷ್ಟು ಸಂಶಯ ಇಲ್ಲ. ಇಂತಹ ಅಮಿತಾಭ್ ತನ್ನ 37 ವರ್ಷಗಳ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಮಿತಾಭ್‍ಗೆ ಅಂದಿನ ದಿನಗಳ ನೆನಪು ಮಾಡಿದ್ದು ಒಂದು ಜಾಕೆಟ್…!

37 ವರ್ಷಗಳ ಹಿಂದೆ `ಬರ್ಸಾತ್ ಕೀ ರಾತ್’ ಚಿತ್ರದಲ್ಲಿ ಮೊದಲ ಬಾರಿಗೆ ಅಮಿತಾಭ್ ಜಾಕೆಟ್ ಧರಿಸಿದ್ದರು. ಇದಾದ ಬಳಿಕ ಹಲವು ಚಿತ್ರಗಳಲ್ಲಿ ಅಮಿತಾಭ್ ಜಾಕೆಟ್ ಧರಿಸಿದ್ದರಾದರೂ ಮೊದಲ ಬಾರಿಗೆ ಧರಿಸಿದ್ದಂತಹ ಜಾಕೆಟ್‍ನ ನೆನಪು ಅವರಲ್ಲಿ ಹಾಗೆಯೇ ಹಸಿರಾಗಿತ್ತು. ಜೊತೆಗೆ, ಈ ಜಾಕೆಟ್ ಕೂಡಾ ಆ ಕಾಲಕ್ಕೆ ಕೊಂಚ ಡಿಫ್ರೆಂಟ್ ಆಗಿಯೇ ಇತ್ತು. ಆದರೆ, ಇದೇ ರೀತಿಯ ಜಾಕೆಟ್ ಇತ್ತೀಚಿನ ದಿನಗಳಲ್ಲೂ ಧರಿಸುವ ಸನ್ನಿವೇಶ ಅಮಿತಾಭ್‍ಗೆ ಎದುರಾಗಿತ್ತು. ಅದು ಜಾಹೀರಾತಿನ ಶೂಟಿಂಗ್‍ಗೆ. ಹೀಗಾಗಿ, ಅಮಿತಾಭ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ಹೊಸ ಮತ್ತು ಹಳೆಯ ಜಾಕೆಟ್ ಧರಿಸಿದ್ದ ಫೋಟೋಗಳನ್ನು ಹಾಕಿದ್ದಾರೆ. ಜೊತೆಗೆ, ಆವತ್ತಿನ ಸನ್ನಿವೇಶವನ್ನೂ ಮೆಲುಕು ಹಾಕಿಕೊಂಡಿದ್ದಾರೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!