Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಸುಳ್ಯದಲ್ಲಿ ವಿದ್ಯಾರ್ಥಿನಿಯನ್ನು ಇರಿದು ಕೊಂದ ವಿದ್ಯಾರ್ಥಿ…!

ಸುಳ್ಯದಲ್ಲಿ ವಿದ್ಯಾರ್ಥಿನಿಯನ್ನು ಇರಿದು ಕೊಂದ ವಿದ್ಯಾರ್ಥಿ…!

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಬೆಚ್ಚಿ ಬಿದ್ದಿದೆ. ಸುಳ್ಯದಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಇರಿದು ಕೊಂದಿದ್ದಾನೆ… ಸುಳ್ಯದ ರಥಬೀದಿಯ ಚೆನ್ನಕೇಶವ ದೇಗುಲದ ಸಮೀಪ ಈ ಘಟನೆ ನಡೆದಿದೆ. ಅಕ್ಷತಾ ಎಂಬ ವಿದ್ಯಾರ್ಥಿನಿಗೆ ಕಾರ್ತಿಕ್ ಎಂಬ ವಿದ್ಯಾರ್ಥಿ ಚೂರಿಯಿಂದ ಇರಿದಿದ್ದಾನೆ. ತಕ್ಷಣ ಅಕ್ಷತಾಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಕ್ಷತಾ ಕೊನೆಯುಸಿರೆಳೆದಿದ್ದಾಳೆ. ಘಟನೆ ಬಳಿಕ ಕಾರ್ತಿಕ್ ಕೂಡಾ ಕೈ ಕೊಯ್ದಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ…!


ಅಕ್ಷತಾ ಮತ್ತು ಕಾರ್ತಿಕ್ ನೆಹರು ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿಎಸ್​ಸಿ ವಿದ್ಯಾರ್ಥಿಗಳು. ಕೃತ್ಯಕ್ಕೂ ಮುನ್ನ ಕಾರ್ತಿಕ್ ಹಿಂಬಾಲಿಸಿಕೊಂಡು ಬಂದಿದ್ದ. ಬಳಿಕ ರಥಬೀದಿಯಲ್ಲಿ ಚೂರಿಯಿಂದ ಇರಿದ್ದ. ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಕ್ಷತಾಳನ್ನು ಆಸ್ಪತ್ರೆಗೆ ಸಾಗಿಸಲಾಯ್ತು. ಆದ್ರೆ, ಸುಳ್ಯ ತಾಲೂಕಿನ ಜಾಲ್ಸೂರು ಸಮೀಪ ತಲುಪಿದಾಗ ಆಂಬುಲೆನ್ಸ್‌ನಲ್ಲೇ ಅಕ್ಷತಾ ಕೊನೆಯುಸಿರೆಳೆದಿದ್ದಾಳೆ. ಇನ್ನು, ಘಟನೆ ಬಳಿಕ ತಕ್ಷಣ ಕಾರ್ತಿಕ್​ನನ್ನು ಹಿಡಿದ ಸ್ಥಳೀಯರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!