Sunday , July 22 2018
ಕೇಳ್ರಪ್ಪೋ ಕೇಳಿ
Home / Gossip / ಇದೇ ವರ್ಷ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಆ್ಯಮಿ ಜಾಕ್ಸನ್…?

ಇದೇ ವರ್ಷ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಆ್ಯಮಿ ಜಾಕ್ಸನ್…?

2017ರಲ್ಲಿ ವಿರಾಟ್ ಮತ್ತು ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇಟಲಿಯಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಇದಾದ ಬಳಿಕ ಬಾಲಿವುಡ್‍ನ ಮೂವರು ದಾಂಪತ್ಯಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದರು. ನಟಿ ಸೋನಂ ಕಪೂರ್ ತನ್ನ ಗೆಳೆಯ ಆನಂದ್ ಅಜುಜಾ ಜೊತೆ ಸಪ್ತಪದಿ ತುಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ವರುಣ್ ದವನ್ ಕೂಡಾ ನತಾಶಾ ದಲಾಲ್‍ರನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳಲು ಸಜ್ಜಾಗಿದೆ. ಈ ನಡುವೆ, ಹಾಲ್ಬಣ್ಣದ ಚೆಲುವೆ ಆ್ಯಮಿ ಜಾಕ್ಸನ್ ಮದುವೆಯ ಸುದ್ದಿ ಕೂಡಾ ಬರುತ್ತಿದೆ.

ಈಗಾಗಲೇ ಯುಕೆ ಮೂಲದ ಮಿಲಿಯನೇರ್ ಜೊತೆಗೆ ಪ್ರೀತಿಗೆ ಬಿದ್ದಿರುವ ಆ್ಯಮಿ ಇದೇ ವರ್ಷ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರಂತೆ. ವ್ಯಾಲೆಂಟೇನ್ ಡೇ ದಿನ ಆ್ಯಮಿ ಗೆಳೆಯನೊಂದಿಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಮ್ಮ ಪ್ರೀತಿಗೆ ಇನ್ನಷ್ಟು ರೆಕ್ಕೆ ಪುಕ್ಕ ತಂದಿದ್ದರು. ಸದ್ಯ ಹಿಂದಿ, ತಮಿಳು, ಕನ್ನಡದ ದಿ ವಿಲನ್ ಚಿತ್ರದಲ್ಲಿ ಬ್ಯುಸಿ ಇರುವ ಆ್ಯಮಿ ಈ ವರ್ಷದ ಅಂತ್ಯದಲ್ಲಿ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಲಿದ್ದಾರೆ ಎಂದು ಹೇಳಲಾಗ್ತಿದೆ.. ಆದ್ರೆ, ಇದಿನ್ನೂ ದೃಢವಾಗಿಲ್ಲ. ಅಲ್ಲಿ ತನಕ ಈ ಸುದ್ದಿಗೆ ಗಾಸಿಪ್ ರೂಪವೇ ಇರಲಿದೆ…!

About sudina

Check Also

ನ್ಯೂಯಾರ್ಕ್​ನಲ್ಲಿ ಪೇಮ ಪತಂಗಗಳ ಸುತ್ತಾಟ…

ನ್ಯೂಯಾರ್ಕ್ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಗಾಯಕ ನಿಕ್ ಜೊನಾಸ್ ನಡುವೆ ಪ್ರೀತಿ ಪ್ರೇಮದಂತಹ ಸುಂದರ …

Leave a Reply

Your email address will not be published. Required fields are marked *

error: Content is protected !!