Monday , June 25 2018
ಕೇಳ್ರಪ್ಪೋ ಕೇಳಿ
Home / Film News / ಸುಂದರ ನೆನಪಿನ ಮೆಲುಕು : ಉದಯ ಟಿವಿಯಲ್ಲಿ ಮಾನಸ ಸರೋವರ…

ಸುಂದರ ನೆನಪಿನ ಮೆಲುಕು : ಉದಯ ಟಿವಿಯಲ್ಲಿ ಮಾನಸ ಸರೋವರ…

ಬೆಂಗಳೂರು : ಮಾನಸ ಸರೋವರ… ಕನ್ನಡ ಚಿತ್ರರಂಗದ ದಿಗ್ದರ್ಶಕ ಪುಟ್ಟಣ ಕಣಗಾಲ್ ಕಡೆದ ಸುಂದರ ಚಿತ್ರ ಕುಸುಮ. ಪ್ರಣಯ ರಾಜ ಶ್ರೀನಾಥ್ ಮತ್ತು ಪದ್ಮವಾಸಂತಿ ಅವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟ ಚಿತ್ರವಿದು. ಈ ಚಿತ್ರ ಇಂದಿಗೂ ಜನಜನಿತ. 1983ರಲ್ಲಿ ರಿಲೀಸ್ ಆದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಹೆಸರಿನಲ್ಲಿ ಧಾರವಾಹಿಯೊಂದು ಬರುತ್ತಿದೆ.

ಫೆಬ್ರವರಿ 26 ರಿಂದ ಉದಯ ಟಿವಿಯಲ್ಲಿ `ಮಾನಸ ಸರೋವರ’ ಧಾರಾವಾಹಿ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಮಾನಸ ಸರೋವರವನ್ನು ನೀವು ಇನ್ನು ಕಣ್ತುಂಬಿಕೊಳ್ಳಬಹುದು. ವಿಶೇಷ ಎಂದರೆ ಮಾನಸ ಸರೋವರ ಚಿತ್ರದಲ್ಲಿ ನಟಿಸಿದ್ದ ಶ್ರೀನಾಥ್, ಪದ್ಮಾವಾಸಂತಿ, ರಾಮಕೃಷ್ಣ ಅವರು ಕೂಡಾ ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೀಮುತ್ತು ಸಿನಿಕ್ರಿಯೇಷನ್ಸ್ ಬ್ಯಾನರ್‍ನಡಿಯಲ್ಲಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಈ ಧಾರಾವಾಹಿಯ ನಿರ್ಮಾಪಕರು. ಶಿವಣ್ಣರ ಪುತ್ರಿ ನಿವೇದಿತಾ ಅವರು ಈ ಧಾರಾವಾಹಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ರಾಮ್ ಜಯಶೀಲ್ ವೈದ್ಯ ಈ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ಮಾನಸ ಸರೋವರ ಚಿತ್ರದ ಕತೆಯ ಮುಂದುವರಿದ ಭಾಗವೆಂಬಂತೆ ಈ ಧಾರಾವಾಹಿ ಬರುತ್ತಿರುವುದರಿಂದ ಈಗಾಗಲೇ ಜನರಲ್ಲಿ ಸಾಕಷ್ಟು ನಿರೀಕ್ಷೆಯನ್ನೂ ಮೂಡಿಸಿದೆ.
ಇನ್ನು, ಈ ಧಾರಾವಾಹಿಗೆ ಸಖತ್ ಆಗಿಯೇ ಪ್ರಚಾರ ಸಿಗುತ್ತಿದೆ. ಫೇಸ್‍ಬುಕ್, ಇನ್ಸ್ಟ್ರಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲೂ ಮಾನಸ ಸರೋವರ ಸಖತ್ ಸೌಂಡ್ ಮಾಡ್ತಿದೆ. ಪ್ರತ್ಯೇಕ ಸೋಶಿಯಲ್ ಮೀಡಿಯಾ ತಂಡವೂ ಧಾರಾವಾಹಿ ತಂಡಕ್ಕೆ ಬೆಂಬಲವಾಗಿ ನಿಂತಿದ್ದು, ಈಗ ಮಾನಸ ಸರೋವರ ಎಲ್ಲೆಲ್ಲೂ ಪ್ರಚಾರದೊಂದಿಗೆ ಕುತೂಹಲ, ನಿರೀಕ್ಷೆಯನ್ನೂ ಮೂಡಿಸಿದೆ…

About sudina

Check Also

ತಣ್ಣಗಾಗದ `ಬಾಸ್’ ವಿವಾದ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ `ಬಾಸ್’ ಯಾರು…? ಹೀಗೊಂದು ಪ್ರಶ್ನೆಗೆ ಒಬ್ಬೊಬ್ಬ ನಟರ ಅಭಿಮಾನಿಗಳದ್ದೂ ಒಂದೊಂದು ಉತ್ತರ… ಚಾಲೆಂಜಿಂಗ್ ಸ್ಟಾರ್ ದರ್ಶನ್ …

Leave a Reply

Your email address will not be published. Required fields are marked *

error: Content is protected !!