Monday , February 18 2019
ಕೇಳ್ರಪ್ಪೋ ಕೇಳಿ
Home / Film News / ಪ್ರಿಯಾ ವಾರಿಯರ್ ಕಣ್ಸನ್ನೆ ದೃಶ್ಯ ಕದ್ದಿದ್ದಾ…? ನಿಜ ಯಾವುದು…?

ಪ್ರಿಯಾ ವಾರಿಯರ್ ಕಣ್ಸನ್ನೆ ದೃಶ್ಯ ಕದ್ದಿದ್ದಾ…? ನಿಜ ಯಾವುದು…?

ತಿರುವನಂತಪುರಂ : ಈಗ ಏನಿದ್ದರೂ ಮಲಯಾಳಂನ `ಒರು ಆಡಾರ್ ಲವ್’ ಚಿತ್ರದ್ದೇ ಸುದ್ದಿ. ಈ ಚಿತ್ರದ ಕಣ್ಸನ್ನೆ ದೃಶ್ಯದ ಮೂಲಕ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ್ದವಳು ನಟಿ ಪ್ರಿಯಾ ವಾರಿಯರ್. ಆದರೆ, ಈ ದೃಶ್ಯ ವೈರಲ್ ಆದ ವೇಗದಲ್ಲೇ ಈ ಚಿತ್ರದ ಬಗೆಗೆ ವಿವಾದಗಳೂ ಹೆಚ್ಚಾದವು. ಇಸ್ಲಾಂ ಭಾವನೆಗೆ ಧಕ್ಕೆಯಾಗಿದೆ ಎಂದು ವಿವಿಧ ಸಂಘಟನೆಗಳು ನಟಿ ಹಾಗೂ ಚಿತ್ರ ತಂಡದ ವಿರುದ್ಧ ದೂರು ನೀಡಿದ್ದರು. ಇದೀಗ ಇದೇ ವಿವಾದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಅದು ಈ ದೃಶ್ಯದ ಕೃತಿ ಚೌರ್ಯ…? ಸದ್ಯ ಎದ್ದಿರುವ ವಿವಾದದ ಪ್ರಕಾರ ಈ ದೃಶ್ಯ ಮಲಯಾಳಂನ ಕಿದು ಎಂಬ ಚಿತ್ರದಿಂದ ಕದ್ದಿರೋದಂತೆ… ಕಿದು ಚಿತ್ರದಲ್ಲೂ ಇದೇ ರೀತಿಯ ದೃಶ್ಯವಿದೆ ಎಂಬುದು ಕೆಲವರ ಆರೋಪ… ಇದಕ್ಕೆ ಕಾರಣ, ದೃಶ್ಯಗಳ ಸಾಮ್ಯತೆ ಮತ್ತು ಎರಡೂ ಚಿತ್ರಕ್ಕೂ ಒಂದೇ ಸಂಕಲನಕಾರ ಇರೋದು. ಆದರೆ, ಇದಕ್ಕೆ ಕಿದು ಚಿತ್ರದ ನಿರ್ಮಾಪಕ ಸಬು ಪಿಕೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

`ನಮ್ಮ ಚಿತ್ರ ಒರ್ ಅಡಾರ್ ಚಿತ್ರಕ್ಕಿಂತಲೂ ಮೊದಲೇ ಶೂಟಿಂಗ್ ಮುಗಿಸಿದೆ. ಈ ಚಿತ್ರಕ್ಕಿಂತಲೂ ಮುನ್ನವೇ ಎಡಿಟಿಂಗ್ ಕೂಡಾ ಮುಗಿದಿದೆ. ಆದರೆ, ಪ್ರಿಯಾ ದೃಶ್ಯ ವೈರಲ್ ಆದ ಬಳಿಕ ಕೆಲವರು ನಾವು ಇದೇ ದೃಶ್ಯದಿಂದ ಕಾಪಿ ಮಾಡಿದ್ದೇವೆ ಎಂಬ ಆರೋಪ ಕೇಳಿ ಬಂದಿತ್ತು. ಇದು ನಿಜ ಅಲ್ಲ. ನಮ್ಮ ಚಿತ್ರದ ಶೂಟಿಂಗ್ ಬೇಗ ಮುಗಿದಿದೆ. ಇನ್ನು, ಅಚ್ಚು ವಿಜಯನ್ ಈ ಎರಡೂ ಚಿತ್ರಗಳ ಸಂಕಲನಕಾರ. ನಮ್ಮ ಚಿತ್ರ ಮುಗಿಸಿದ ಬಳಿಕ ಅಚ್ಚು ಒರ್ ಅಡಾರ್ ಲವ್ ಚಿತ್ರದ ಕೆಲಸ ಆರಂಭಿಸಿದ್ದರು. ಇದಾದ ಬಳಿಕವೇ ಒರ್ ಅಡಾರ್ ಚಿತ್ರದ ಈ ದೃಶ್ಯವನ್ನೂ ಶೂಟಿಂಗ್ ಮಾಡಿದ್ದು. ಹೀಗಾಗಿ, ಒರ್ ಅಡಾರ್ ಲವ್‍ನಲ್ಲಿರುವ ದೃಶ್ಯ ನಮ್ಮಿಂದ ಅವರು ಕದ್ದಿದ್ದು. ನಮಗೆ ಯಾರ ಚಿತ್ರವನ್ನೂ ಕಾಪಿ ಮಾಡುವ ಅಗತ್ಯ ಇಲ್ಲ’ ಎಂದು ಅವರು ಹೇಳಿದ್ದಾರೆ. ಇನ್ನು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದೂ ಇವರು ಸ್ಪಷ್ಟಪಡಿಸಿದ್ದಾರೆ. ಇದೇ ವಿಷಯವನ್ನು ದೊಡ್ಡದು ಮಾಡುವುದು ನನಗೆ ಇಷ್ಟ ಇಲ್ಲ. ಎಲ್ಲರಲ್ಲೂ ಒಂದಷ್ಟು ಸಾಮ್ಯತೆ ಇರುತ್ತದೆ. ಹಾಗೆಯೇ ಎರಡೂ ಚಿತ್ರದಲ್ಲೂ ಸಾಮ್ಯತೆ ಇರುತ್ತದೆ ಎಂಬುದು ಸಬು ಸ್ಪಷ್ಟ ನುಡಿ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!