Wednesday , August 15 2018
ಕೇಳ್ರಪ್ಪೋ ಕೇಳಿ
Home / Film News / ಸೂಪರ್ ಸ್ಟಾರ್ ನಟ ಮುಮ್ಮಟ್ಟಿ ಅವರನ್ನು ಭೇಟಿಯಾದ ಕಿಚ್ಚ ಸುದೀಪ್…

ಸೂಪರ್ ಸ್ಟಾರ್ ನಟ ಮುಮ್ಮಟ್ಟಿ ಅವರನ್ನು ಭೇಟಿಯಾದ ಕಿಚ್ಚ ಸುದೀಪ್…

ಬೆಂಗಳೂರು : ಕಿಚ್ಚ ಸುದೀಪ್ ದಕ್ಷಿಣ ಭಾರತದಷ್ಟೇ ಅಲ್ಲ ಬಾಲಿವುಡ್, ಹಾಲಿವುಡ್‍ನಲ್ಲೂ ಗುರುತಿಸಿಕೊಂಡವರು. ಸದ್ಯ ಕನ್ನಡದ `ದಿ ವಿಲನ್’ ಚಿತ್ರದಲ್ಲಿ ನಟಿಸುತ್ತಿರುವ ಕಿಚ್ಚ ಪೈಲ್ವಾನ್ ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ. ಹಾಲಿವುಡ್‍ನ ಒಂದು ಪ್ರಾಜೆಕ್ಟ್ ಕೂಡಾ ಸುದೀಪ್ ಕೈಯಲ್ಲಿದೆ. ಈ ನಡುವೆ, ಮಲಯಾಳಂ ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಸರಿಯಾಗಿ ಈಗ ಸುದೀಪ್ ಮತ್ತು ಮಲಯಾಳಂನ ಸೂಪರ್ ಸ್ಟಾರ್ ಮುಮ್ಮಟ್ಟಿ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡ್ತಿದೆ. ಇತ್ತೀಚೆಗೆ ಸುದೀಪ್ ಪತ್ನಿ ಪ್ರಿಯಾ ಜೊತೆ ಮುಮ್ಮಟ್ಟಿ ಅವರನ್ನು ಭೇಟಿಯಾಗಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಸುದೀಪ್ ಮುಮ್ಮಟ್ಟಿ ಅಭಿನಯದ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿದೆ.

About sudina

Check Also

ಫಿಕ್ಸ್ ಆಯ್ತು ರಣವೀರ್ ದೀಪಿಕಾ ಮದುವೆ ಡೇಟ್…

ಮುಂಬೈ : ಬಾಲಿವುಡ್​ನ ಮತ್ತೊಂದು ಪ್ರೇಮಪತಂಗಗಳು ದಾಂಪತ್ಯಕ್ಕೆ ಕಾಲಿಡುವ ಕ್ಷಣ ಬಂದಿದೆ. ಇಷ್ಟು ದಿನ ಗಾಸಿಪ್ ಕಾಲಂಗೆ ವಸ್ತುವಾಗಿದ್ದ ರಣವೀರ್ …

Leave a Reply

Your email address will not be published. Required fields are marked *

error: Content is protected !!