Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಕಣ್ಸನ್ನೆ ಚೆಲುವೆ ಪ್ರಿಯಾ ಈಗ ನಿರಾಳ…

ಕಣ್ಸನ್ನೆ ಚೆಲುವೆ ಪ್ರಿಯಾ ಈಗ ನಿರಾಳ…

ನವದೆಹಲಿ : ಕಣ್ಣೋಟದಲ್ಲೇ ದೇಶದ ಜನರನ್ನು ಸೆಳೆದಿದ್ದ ಚೆಲುವೆ ಪ್ರಿಯಾ ವಾರಿಯರ್​ಗೆ ಸಮಾಧಾನ ತರುವಂತಹ ಸುದ್ದಿ ಬಂದಿದೆ. ‘ಒರ್ ಅಡಾರ್ ಲವ್’ ಚಿತ್ರದ ಹಾಡಿನ ಬಗ್ಗೆ ಆಕ್ಷೇಪವೆತ್ತಿ ದೇಶಾದ್ಯಂತ ದಾಖಲಾಗಿದ್ದ ಕ್ರಿಮಿನಲ್ ಕೇಸ್​ಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ, ನ್ಯಾ. ಎ.ಎಂ.ಖಾನ್ವೀಲ್ಕರ್ ಮತ್ತು ನ್ಯಾ.ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠ ಈ ಆದೇಶ ಹೊರಡಿಸಿದೆ. ಜೊತೆಗೆ, ಎಲ್ಲಾ ರಾಜ್ಯದಲ್ಲೂ ಈ ಪ್ರಮೋಷನಲ್​ ವೀಡಿಯೋ ಬಗ್ಗೆ ದಾಖಲಾಗಿರುವ ಕ್ರಿಮಿನಲ್ ಕೇಸ್​ಗಳ ಪ್ರೊಸಿಡಿಂಗ್ಸ್​ಗೂ ನ್ಯಾಯಪೀಠ ನಿರ್ಬಂಧ ಹೇರಿದೆ.

‘ಒರ್ ಅಡಾರ್ ಲವ್’ ಚಿತ್ರದ ಹಾಡು ರಾತ್ರೋರಾತ್ರಿ ವೈರಲ್ ಆಗಿತ್ತು. ಪ್ರಿಯಾ ವಾರಿಯರ್ ಅಭಿನಯಿಸಿದ್ದ ಆ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿತ್ತು. ಆದ್ರೆ, ಇದಾದ ಬಳಿಕ ಈ ಹಾಡಿನಲ್ಲಿ ನಮ್ಮ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಕೆಲವು ರಾಜ್ಯಗಳಲ್ಲಿ ದೂರು ಸಲ್ಲಿಸಿದ್ದವು. ಹೀಗಾಗಿ, ನಟಿ ಪ್ರಿಯಾ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಈ ಕೇಸ್ ವಿರುದ್ಧ ಪ್ರಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!