Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / ಕಮಲ್ ಪಕ್ಷ ಸ್ಥಾಪಿಸುವಾಗ ಮೊದಲು ಚರ್ಚಿಸಿದ್ದೇ ರಜನಿಕಾಂತ್ ಬಳಿ…!

ಕಮಲ್ ಪಕ್ಷ ಸ್ಥಾಪಿಸುವಾಗ ಮೊದಲು ಚರ್ಚಿಸಿದ್ದೇ ರಜನಿಕಾಂತ್ ಬಳಿ…!

ಚೆನ್ನೈ : ಸೂಪರ್‍ಸ್ಟಾರ್ ಕಮಲ್ ಹಾಸನ್ ಅಧಿಕೃತವಾಗಿಯೇ ರಾಜಕೀಯ ಪ್ರವೇಶಿಸಿದ್ದಾರೆ. `ಮಕ್ಕಳ್ ನೀತಿ ಮಯ್ಯಂ’ ಎಂಬ ಪಕ್ಷವನ್ನೂ ಸ್ಥಾಪಿಸಿ ಆಗಿದೆ. ಇನ್ನೊಂದ್ಕಡೆ, ಮತ್ತೋರ್ವ ಸೂಪರ್‍ಸ್ಟಾರ್ ರಜನಿಕಾಂತ್ ಅವರು ಕೂಡಾ ರಾಜಕೀಯ ಪ್ರವೇಶಕ್ಕೆ ಅಣಿಯಾಗುತ್ತಿದ್ದಾರೆ. ಈ ನಡುವೆ, ತಮ್ಮ ಬಹುಕಾಲದ ಗೆಳೆಯ ಕಮಲ್ ಹಾಸನ್ ಪಕ್ಷ ಸ್ಥಾಪಿಸುವ ವಿಷಯ ರಜನಿಗೆ ಮೊದಲೇ ಗೊತ್ತಿತ್ತಾ ಎಂಬ ಚರ್ಚೆಯೂ ಶುರುವಾಗಿದೆ. ಇದಕ್ಕೆ ಸ್ವತಃ ಕಮಲ್ ಹಾಸನ್ ಅವರೇ ಉತ್ತರ ಕೊಟ್ಟಿದ್ದಾರೆ. ಪಕ್ಷ ಸ್ಥಾಪಿಸುವ ಮೊದಲು ಕಮಲ್ ಚರ್ಚಿಸಿದ್ದೇ ತನ್ನ ಗೆಳೆಯ ರಜನಿ ಬಳಿ…! ಇದು ಇದುವರೆಗೆ ಯಾರಿಗೂ ಗೊತ್ತಿರಲಿಲ್ಲ…! ಪತ್ರಿಕೆಗೊಂದು ಬರೆದ ಅಂಕಣದಲ್ಲಿ ಕಮಲ್ ಈ ಬಗ್ಗೆ ಬರೆದುಕೊಂಡಿದ್ದಾರೆ.

ಪಕ್ಷ ಸ್ಥಾಪಿಸುವ ಮೊದಲು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಹಾಗೂ ಹಿರಿಯ ಕಮ್ಯೂನಿಷ್ಟ್ ನಾಯಕ ಆರ್ ನಲ್ಲಕನ್ನು ಅವರನ್ನು ಭೇಟಿಯಾಗುವ ಮೊದಲು ಕಮಲ್ ರಜನಿಕಾಂತ್ ಅವರೊಂದಿಗೆ `ರಹಸ್ಯ’ವಾಗಿ ಮಾತುಕತೆ ನಡೆಸಿದ್ದರು. ಅದು ಬಿಗ್‍ಬಾಸ್ ಶೂಟಿಂಗ್ ಸಂದರ್ಭ. ಪೊನ್ನಮಲೈನಲ್ಲಿ ಈ ಶೂಟಿಂಗ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇಲ್ಲೇ ರಜನಿ ಅವರ ಕಾಲ ಚಿತ್ರದ ಶೂಟಿಂಗ್ ಕೂಡಾ ನಡೆಯುತ್ತಿತ್ತು. ಈ ವೇಳೆ, ಕಮಲ್ ಮತ್ತು ರಜನಿ ಭೇಟಿಯಾಗಿ ಪಕ್ಷ ಸ್ಥಾಪನೆಯ ಬಗ್ಗೆ ಮಾತುಕತೆ ನಡೆಸಿದ್ದರು. ಕಮಲ್ ಕೂಡಾ ತನ್ನ ಗೆಳೆಯನ ಸಲಹೆಯನ್ನು ಪಡೆದುಕೊಂಡಿದ್ದರು. ಕಾರಿನಲ್ಲಿ ಕುಳಿತೇ ಇವರಿಬ್ಬರು ಚರ್ಚೆ ನಡೆಸಿದ್ದರು. ಇದಾದ ಬಳಿಕವೇ ಕಮಲ್‍ಗೆ ಪಕ್ಷ ಕಟ್ಟುವ ಬಯಕೆ ಗಟ್ಟಿಗೊಂಡಿದ್ದಂತೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!