Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / ರಜನಿ, ಅಕ್ಷಯ್ ಅಭಿನಯದ 2.0 ಚಿತ್ರ ದೀಪಾವಳಿಗೆ ತೆರೆಗೆ? : ಆದ್ರೆ, ಅಮೀರ್ ಖಾನ್ ಒಪ್ತಿಲ್ಲ…!

ರಜನಿ, ಅಕ್ಷಯ್ ಅಭಿನಯದ 2.0 ಚಿತ್ರ ದೀಪಾವಳಿಗೆ ತೆರೆಗೆ? : ಆದ್ರೆ, ಅಮೀರ್ ಖಾನ್ ಒಪ್ತಿಲ್ಲ…!

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರ ಅದ್ಯಾಕೋ ಬಿಡುಗಡೆ ಆಗುವುದಕ್ಕೆ ತುಂಬಾ ಅಡೆತಡೆಗಳಾಗ್ತಿವೆ. ರಜನಿಕಾಂತ್ ಅಭಿನಯದ ಇನ್ನೊಂದು ಚಿತ್ರ `ಕಾಲ ಕರಿಕಾಲನ್’ ಏಪ್ರಿಲ್ 27ಕ್ಕೆ ರಿಲೀಸ್ ಆಗುತ್ತದೆ. ಇದಾದ ಬಳಿಕವೇ 2.0 ಚಿತ್ರ ರಿಲೀಸ್ ಆಗುತ್ತದೆ ಎಂದು ಪಕ್ಕಾ ಆಗಿತ್ತು. ನಿರ್ದೇಶಕ ಶಂಕರ್ ಕೂಡಾ ರಾತ್ರಿ ಹಗಲು ಎನ್ನದೆ ಚಿತ್ರ ಫೈನಲ್ ಎಡಿಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಚಿತ್ರ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ ಮಾತ್ರ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ತುಟಿ ಬಿಚ್ಚುತ್ತಿಲ್ಲ. ಇತ್ತೀಚಿಗೆ ಸಿಕ್ಕ ಸುದ್ದಿ ಪ್ರಕಾರ ಸ್ವಾತಂತ್ರ್ಯ ದಿನಾಚರಣೆ ಅಥವಾ ದೀಪಾವಳಿಗೆ ಈ ಚಿತ್ರ ಬಿಡುಗಡೆಯ ಚಿಂತನೆ ಚಿತ್ರತಂಡಕ್ಕಿಂತ್ತಂತೆ. ಅದರಂತೆ ಇದೀಗ ಬಹುತೇಕ ದೀಪಾವಳಿಗೆ 2.0 ಚಿತ್ರವನ್ನು ತೆರೆಗೆ ತರುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಆದರೆ, ಇದಕ್ಕೆ ಈಗ ಅಮೀರ್ ಖಾನ್ ಅಡ್ಡಿಯಾಗಿದ್ದಾರೆ…!

ಅರೇ ದಕ್ಷಿಣ ಭಾರತದ ರಜನಿ ಚಿತ್ರಕ್ಕೆ ಅಮೀರ್ ಖಾನ್ ಹೇಗೆ ಅಡ್ಡಿಯಾಗಿದ್ದಾರೆ ಎನ್ನುತ್ತೀರಾ…? ಅದಕ್ಕೆ ಕಾರಣ ಇದೆ. ಅಮೀರ್ ಖಾನ್ ಅಭಿನಯದ `ಥಗ್ಸ್ ಅಫ್ ಹಿಂದೂಸ್ಥಾನ್’ ದೀಪಾವಳಿಗೆ ರಿಲೀಸ್ ಆಗುತ್ತಿದೆ. ಆದರೆ, ಲೈಕಾ ಸಂಸ್ಥೆಗೆ 2.0 ಚಿತ್ರ ಅಮೀರ್ ಖಾನ್ ಚಿತ್ರದೊಂದಿಗೆ ಕ್ಲ್ಯಾಶ್ ಆಗುವುದು ಇಷ್ಟ ಇಲ್ಲ. ಹೀಗಾಗಿ, ಸಂಸ್ಥೆ ಆ ದಿನ ಚಿತ್ರ ಬಿಡುಗಡೆ ಮಾಡದಂತೆ ಅಮೀರ್ ಖಾನ್‍ಗೆ ಮನವಿ ಮಾಡಿಕೊಂಡಿದೆ. ಆದರೆ, ಅಮೀರ್ ಖಾನ್ ಇದಕ್ಕೆ `ಸಾಧ್ಯವಿಲ್ಲ’ ಎಂದು ಹೇಳಿದ್ದಾರಂತೆ. ಹೀಗಾಗಿ, ಮೊದಲ ಹಂತದ ಮಾತುಕತೆ ಬಹುತೇಕ ಮುರಿದು ಬಿದ್ದಿದೆ. ಇದಾದ ಬಳಿಕ ಸ್ವತಃ ರಜನಿಕಾಂತ್ ಅವರೇ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ಅಮೀರ್ ಜೊತೆ ರಜನಿ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಈಗ ಮತ್ತೆ ಚರ್ಚೆ ಮುಂದುವರಿದಿದೆ. ಎರಡೂ ಚಿತ್ರಕ್ಕೆ ಸಂಬಂಧಿಸಿದವರು ಮತ್ತೆ ಮಾತುಕತೆಯಲ್ಲಿ ತೊಡಗಿದ್ದಾರೆ…

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!